Select Your Language

Notifications

webdunia
webdunia
webdunia
webdunia

ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ವಾಹನ  ಸವಾರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
ನವದೆಹಲಿ , ಶುಕ್ರವಾರ, 21 ಜೂನ್ 2019 (06:34 IST)
ನವದೆಹಲಿ : ಚಾಲಕರಿಗೆ ಕನಿಷ್ಟ ಶಿಕ್ಷಣ ಇರಬೇಕೆಂಬ ಕೇಂದ್ರ ಸರ್ಕಾರ ನಿಯಮದ ವಿರುದ್ಧ ದೇಶದಾದ್ಯಂತ ಬಾರೀ ವಿರೋಧ ವ್ಯಕ್ತವಾಗಿದ್ದು, ಇದೀಗ ಈ ನಿಯಮವನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದಾಗಿ ತಿಳಿಸಿದೆ.




ರಸ್ತೆ ಸಾರಿಗೆ ಸಚಿವಾಲಯ ಹಿಂದೆ ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್ 1989ರ ನಿಯಮ 8ರಂತೆ ಸಾರಿಗೆ ವಾಹನ ಚಾಲಕ 8ನೇ ತರಗತಿ ಉತ್ತೀರ್ಣರಾಗಿರುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತಂದಿತ್ತು.


ಆದರೆ ಇದರಿಂದ ಆರ್ಥಿಕವಾಗಿ ಹಿಂದುಳಿದಿರುವ ಅವಿದ್ಯಾವಂತರಿಗೆ ಸಮಸ್ಯೆ ಉಂಟಾಗುವುದು ಮಾತ್ರವಲ್ಲದೇ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಯಿತು. ಇದನ್ನು ಮನಗೊಂಡ ಕೇಂದ್ರ ಸರ್ಕಾರ ಈ ನಿಯಮವನ್ನು ಕೈಬಿಟ್ಟಿದ್ದು, ವಾಹನ ಚಲಾಯಿಸಲು ಶೈಕ್ಷಣಿಕ ಅರ್ಹತೆಗಿಂತ ಚಾಲಕನ ತರಬೇತಿ, ಕೌಶಲ್ಯ ಮುಖ್ಯ ಎಂದು ತಿಳಿಸಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

6 ಎಕರೆ ಭೂಮಿಯಲ್ಲಿ ರಂಗೋಲಿಯ ಛತ್ರಪತಿ ಶಿವಾಜಿ ಪ್ರತಿಮೆ