Publish Date: Mon, 24 Jun 2019 (20:05 IST)
Updated Date: Mon, 24 Jun 2019 (20:07 IST)
ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಮತ್ತೊಂದು ಹೊಸ ಸುದ್ದಿ ಬಾಂಬ್ ಸ್ಪೋಟ ಮಾಡಿದ್ದಾರೆ.
ರಾಜ್ಯದಲ್ಲಿರುವ ಮೈತ್ರಿ ಸರಕಾರಕ್ಕೆ ಅದರ ಶಾಸಕರೇ ಮುಕ್ತಿ ಕೊಟ್ಟು ಅಧಿಕಾರದಿಂದ ದೂರ ಇಡುತ್ತಾರೆ. ರಾಜ್ಯದ ರಾಜಕೀಯದಲ್ಲಿ ನಡೆಯಲಿರುವ ಬೆಳವಣಿಗೆಗಳನ್ನು ಕಾಯ್ದು ನೋಡಬೇಕು. ಹೀಗಂತ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ಆಡಳಿತ ದಿಕ್ಕು ತಪ್ಪಿದೆ. ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ ಜಗಳ ನಿತ್ಯ ಬೀದಿಗೆ ಬೀಳುತ್ತಿದೆ. ಇದರಿಂದ ಜನರಿಗೆ ಜನಪ್ರತಿನಿಧಿಗಳೇ ಮುಕ್ತಿ ಕೊಡಬೇಕು. ಅವರೇ ಕೊಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ರಾಜ್ಯದ ಸಮ್ಮಿಶ್ರ ಸರಕಾರ ಹೆಚ್ಚು ದಿನ ಬಾಳೋದಿಲ್ಲ. ಉಭಯ ಪಕ್ಷಗಳ ಕಚ್ಚಾಟ ಹೆಚ್ಚಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.