Publish Date: Sat, 22 Jun 2019 (16:26 IST)
Updated Date: Sat, 22 Jun 2019 (16:27 IST)
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆ ಸತ್ಯ ಅನ್ಸುತ್ಸೆ. ಹೀಗಂತ ಕಾಂಗ್ರೆಸ್ ನ ರೆಬಲ್ ನಾಯಕ ಹೇಳಿದ್ದಾರೆ.
ಮಂಡ್ಯದಲ್ಲಿ ಎನ್.ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು, ಮಧ್ಯಂತರ ಚುನಾವಣೆ ಯಾವಾಗಾದ್ರೂ ಬರಬಹುದು ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ದೇವೇಗೌಡರು ಈ ರೀತಿ ಹೇಳಿದ್ದಾರೆಂದರೇ ಸತ್ಯ ಅನ್ಸುತ್ತೆ.
ಆ ರೀತಿಯ ವಾತಾವರಣ ನಮಗೆ ಕಂಡು ಬರ್ತಿಲ್ಲ ಎಂದಿದ್ದಾರೆ.
ಆದರೂ ದೇವೇಗೌಡರ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಪಕ್ಷಗಳು ಇವತ್ತು ಅಭಿವೃದ್ಧಿ ಬಿಟ್ಟು ರಾಜಕೀಯ ವಿಚಾರದಲ್ಲಿ ತೊಡಗಿಸಿಕೊಂಡಿವೆ. ಇದೊಂದು ದೊಡ್ಡ ದುರಂತ ಎಂದರು.
ಇದೆಲ್ಲವನ್ನೂ ನೋಡಿ ಜನ ಒಂದು ಪಕ್ಷಕ್ಕೆ ಅಧಿಕಾರ ಕೊಡಲು ತೀರ್ಮಾನಿಸಿದ್ದಾರೆ ಅಂತ ಕಾಂಗ್ರೆಸ್ ನ ರೆಬಲ್ ನಾಯಕ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.