Publish Date: Fri, 21 Jun 2019 (14:45 IST)
Updated Date: Fri, 21 Jun 2019 (14:46 IST)
ಮೈತ್ರಿ ಸರಕಾರದ ಪಾಲುದಾರು ಪಕ್ಷವಾಗಿರುವ ಜೆಡಿಎಸ್ ಇದೀಗ ಕಾಂಗ್ರೆಸ್ ಗೆ ಭರ್ಜರಿ ಟಾಂಗ್ ನೀಡಿದೆ.
ರಾಜ್ಯದ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು. ಹೀಗಂತ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿಕೆ ನೀಡಿದ್ದು, ಇದು ಕಾಂಗ್ರೆಸ್ ಪಾಳೆಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೆಚ್.ಡಿ.ದೇವೇಗೌಡರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸೋದಾಗಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳುವ ಮೂಲಕ ಮೈತ್ರಿ ಸರಕಾರ ಉಳಿಯೋ ಬಗ್ಗೆ ಅನುಮಾನಗಳು ಮುಂದುವರಿಯುವಂತೆ ಮಾಡಿದ್ದಾರೆ.
ಇನ್ನು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಮಧ್ಯಂತರ ಚುನಾವಣೆ ಪ್ರಶ್ನೆಯೇ ಬರೋದಿಲ್ಲ. ರಾಜ್ಯ ಸರಕಾರ ಅವಧಿ ಪೂರ್ಣಗೊಳಿಸುತ್ತದೆ ಎಂದಿದ್ದಾರೆ.