Select Your Language

Notifications

webdunia
webdunia
webdunia
webdunia

ಹಕ್ಕು ಪತ್ರ ವಿತರಣೆಗೆ 15 ದಿನ ಡೆಡ್ ಲೈನ್ ನೀಡಿದ ಸಚಿವ

ಹಕ್ಕು ಪತ್ರ ವಿತರಣೆಗೆ 15 ದಿನ ಡೆಡ್ ಲೈನ್  ನೀಡಿದ ಸಚಿವ
ಕಲಬುರಗಿ , ಗುರುವಾರ, 4 ಜುಲೈ 2019 (14:10 IST)
ಸರ್ಕಾರಿ ಜಮೀನು ಕಬಳಿಕೆ ಮಾಡಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಒತ್ತುವರಿ ಜಮೀನನ್ನು  ಸರ್ಕಾರದ ವಶಕ್ಕೆ ಪಡೆಯಿರಿ ಎಂದು ಕಂದಾಯ ಸಚಿವ ಖಡಕ್ ಸೂಚನೆ ನೀಡಿದ್ದಾರೆ.

ಸಾಗುವಳಿ ಭೂಮಿ ಒತ್ತುವರಿ ಸಕ್ರಮ ಪ್ರಕರಣಗಳು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸುವ ಕುರಿತು ಬಂದಿರುವ ಅರ್ಜಿಗಳ ಪೈಕಿ ಈಗಾಗಲೆ ವಿಲೇವಾರಿ ಮಾಡಿರುವ ಪ್ರಕರಣಗಳಲ್ಲಿ ಇನ್ನು ಹಕ್ಕು ಪತ್ರ, ಸಾಗುವಳಿ ಚೀಟಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸಚಿವರು.

ಮುಂದಿನ 15 ದಿನದಲ್ಲಿ ಎಲ್ಲಾ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಹಕ್ಕು ಪತ್ರ, ಸಾಗುವಳಿ ಚೀಟಿ ವಿತರಣೆ ಮಾಡಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಆದೇಶ ನೀಡಿದ್ರು.

ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಿಮ್ಮ ಸ್ವಂತದ ಜಮೀನು ಇನ್ನೊಬ್ಬರ ಪಾಲಾದರೆ ಸುಮ್ಮನಿರುವಿರಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು ಯಾವುದೇ ಮುಲಾಜಿಲ್ಲದೆ ಮತ್ತು ರಾಜಕೀಯ ಒತ್ತಡಕ್ಕೂ ಮಣಿಯದೇ ಒತ್ತುವರಿ ಜಮೀನು ತೆರವಿಗೆ ಮುಂದಾಗಿ ಎಂದು . ಸಚಿವರು ಖಡಕ್ ಸೂಚನೆ ನೀಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಲಂಕೇಶ್‌ ಹತ್ಯೆ ವಿಚಾರ; ರಾಹುಲ್‌ ಗಾಂಧಿ ವಿರುದ್ಧ ಆರ್.ಎಸ್.ಎಸ್. ನೀಡಿದ ಮಾನನಷ್ಟ ಮೊಕದ್ದಮೆ ವಜಾ