Publish Date: Fri, 01 Feb 2019 (19:40 IST)
Updated Date: Fri, 01 Feb 2019 (19:42 IST)
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಚುನಾವಣಾ ಬಜೆಟ್ ಆಗಿದೆ ಎಂದು ಕಂದಾಯ ಸಚಿವ ಟೀಕೆ ಮಾಡಿದ್ದಾರೆ.
ಸಚಿವ ಆರ್. ವಿ ದೇಶಪಾಂಡೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಡಿರುವ ಬಜೆಟ್ ಮಧ್ಯಮ ವರ್ಗದವರಿಗೆ, ಬಡವರಿಗೆ ಅನುಕೂಲಕರವಾಗಿದ್ದರೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರ ಕಣ್ಣಿಗೆ ನೀರೊರೆಸುವ ತಂತ್ರ ಮಾಡಲಾಗಿದೆ.
ಹೀಗಂತ ಕೇಂದ್ರ ಸರಕಾರ ಹಾಗೂ ಬಿಜೆಪಿ ಮುಖಂಡರ ವಿರುದ್ಧ ದೇಶಪಾಂಡೆ ಟೀಕೆ ಮಾಡಿದ್ದಾರೆ.