Publish Date: Wed, 03 Jul 2019 (20:23 IST)
Updated Date: Wed, 03 Jul 2019 (20:25 IST)
ಭ್ರಷ್ಟಾಚಾರ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ 600 ಕ್ಕೂ ಹೆಚ್ಚು ಸರಕಾರಿ ಅಧಿಕಾರಿಗಳ ಮೇಲೆ ಸಿಎಂ ಕಠಿಣ ಕ್ರಮ ಕೈಗೊಂಡಿದ್ದಾರೆ.
600 ಸರಕಾರಿ ನೌಕರರ ಮೇಲೆ ಕ್ರಮ ಹಾಗೂ 200 ಸಿಬ್ಬಂದಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದೆ. ಇಂಥದ್ದೊಂದು ದಿಟ್ಟ ಕ್ರಮವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೈಗೊಂಡಿದ್ದಾರೆ.
ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಾಗೂ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ವರ್ಗಾವಣೆ, ಅವರ ಭವಿಷ್ಯದ ಬಡ್ತಿಗಳನ್ನು ತಡೆಹಿಡಿಯುವುದು ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಲಾಗಿದೆ.
ಯುಪಿ ಸರಕಾರವು 50 ವರ್ಷಕ್ಕಿಂತ ಮೇಲ್ಪಟ್ಟ ಭ್ರಷ್ಟ ಹಾಗೂ ಕೆಲಸ ಮಾಡದ ಪೊಲೀಸ್ ಹಿರಿಯ ಅಧಿಕಾರಿಗಳನ್ನು ಬಲವಂತವಾಗಿ ನಿವೃತ್ತಿ ಮಾಡಲು ಮುಂದಾಗಿದೆ.