Publish Date: Thu, 04 Jul 2019 (10:30 IST)
Updated Date: Thu, 04 Jul 2019 (10:32 IST)
ರಾಮನಗರ : ಕೈ ನಾಯಕರ ರಾಜೀನಾಮೆ ಬೆನ್ನಲ್ಲೇ ತವರು ಜಿಲ್ಲೆಯಲ್ಲೇ ಇದೀಗ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಬಿಗ್ ಶಾಕ್ ಎದುರಾಗಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ.ಪಿ.ಅಶೋಕ್ ಕುಮಾರ್ ಅವರು ರಾಜೀನಾಮೆ ನೀಡಿದ್ದು, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಎಂ.ಪಿ.ಅಶೋಕ್ ಕುಮಾರ್ ವೈಯಕ್ತಿಕ ಕಾರಣಗಳನ್ನ ನೀಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕೂಡ ಅವರ ದಿಢೀರ್ ರಾಜೀನಾಮೆ ಅಚ್ಚರಿಕೆ ಕಾರಣವಾಗಿದೆ.