Select Your Language

Notifications

webdunia
webdunia
webdunia
webdunia

ರಫೇಲ್ ಡೀಲ್ ಪ್ರಕರಣದಲ್ಲಿ ಮೋದಿಗೆ ಜಯ; ಈ ಬಗ್ಗೆ ಬಿಎಸ್.ಯಡಿಯೂರಪ್ಪ ಹೇಳಿದ್ದೇನು?

ರಫೇಲ್ ಡೀಲ್ ಪ್ರಕರಣದಲ್ಲಿ ಮೋದಿಗೆ ಜಯ; ಈ ಬಗ್ಗೆ ಬಿಎಸ್.ಯಡಿಯೂರಪ್ಪ ಹೇಳಿದ್ದೇನು?
ಬೆಳಗಾವಿ , ಶುಕ್ರವಾರ, 14 ಡಿಸೆಂಬರ್ 2018 (11:59 IST)
ಬೆಳಗಾವಿ : ರಫೇಲ್ ಡೀಲ್ ತನಿಖೆ ಕುರಿತು ಸುಪ್ರೀಂ ನಲ್ಲಿ ಅರ್ಜಿ ವಜಾವಾದ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ.


ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಒಪ್ಪಂದದ ವ್ಯವಹಾರದ ಬಗ್ಗೆ ಯಾವುದೇ ಅನುಮಾನವಿಲ್ಲ . ಆದ್ದರಿಂದ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ತನಿಖೆಗೆ ಆದೇಶ ಇಲ್ಲ ಎಂದು ಹೇಳಿದೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್.ಯಡಿಯೂರಪ್ಪ ಅವರು, ‘ರಫೇಲ್ ಡೀಲ್ ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ರಫೇಲ್ ಡೀಲ್ ತನಿಖೆ ಕುರಿತು ಅರ್ಜಿ ವಜಾವಾಗಿದ್ದು ಸಂತೋಷವಾಗಿದೆ. ಕಾಂಗ್ರೆಸ್ ನಿಂದ ಪ್ರಧಾನಿ ಮೋದಿಯನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆದಿದೆ. ಅರ್ಜಿ ವಜಾ ಆಗಿದ್ದು ಕಾಂಗ್ರೆಸ್ ಗೆ ಅವನಾನಕರ ಬೆಳವಣೆಗೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಫೇಲ್ ಡೀಲ್ ಪ್ರಕರಣ ಹಿನ್ನಲೆ; ಲೋಕಸಭೆಯಲ್ಲಿ ಭಾರೀ ಗದ್ದಲ, ಕಲಾಪ ಮುಂದೂಡಿಕೆ