Select Your Language

Notifications

webdunia
webdunia
webdunia
webdunia

ರಫೇಲ್ ಡೀಲ್ ಪ್ರಕರಣ ಹಿನ್ನಲೆ; ಲೋಕಸಭೆಯಲ್ಲಿ ಭಾರೀ ಗದ್ದಲ, ಕಲಾಪ ಮುಂದೂಡಿಕೆ

ರಫೇಲ್ ಡೀಲ್ ಪ್ರಕರಣ ಹಿನ್ನಲೆ; ಲೋಕಸಭೆಯಲ್ಲಿ ಭಾರೀ ಗದ್ದಲ, ಕಲಾಪ ಮುಂದೂಡಿಕೆ
ನವದೆಹಲಿ , ಶುಕ್ರವಾರ, 14 ಡಿಸೆಂಬರ್ 2018 (11:54 IST)
ನವದೆಹಲಿ : ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಇದೀಗ ಲೋಕಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಂದ ಬಾರೀ ಗದ್ದಲ ಏರ್ಪಟ್ಟ ಹಿನ್ನಲೆಯಲ್ಲಿ ಕಲಾಪವನ್ನು ಮುಂದೂಡಲಾಗಿದೆ.


ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಒಪ್ಪಂದದ ವ್ಯವಹಾರದ ಬಗ್ಗೆ ಯಾವುದೇ ಅನುಮಾನವಿಲ್ಲ . ಆದ್ದರಿಂದ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ತನಿಖೆಗೆ ಆದೇಶ ಇಲ್ಲ ಎಂದು ಹೇಳಿದೆ.


ಈ ತೀರ್ಪು ಪ್ರಕಟವಾದ ಹಿನ್ನಲೆಯಲ್ಲಿ ಇದೀಗ ಲೋಕಸಭೆಯಲ್ಲಿ  ಕಾಂಗ್ರೆಸ್ ವಿರುದ್ಧ ಬಿಜೆಪಿ ಸಂಸದರು “ನಾವು ಚೋರ್ ಅಲ್ಲ, ಚೌಕಿದಾರರು ಅಂತ  ಘೋಷಣೆ ಕೂಗಿದ್ದು, ರಾಹುಲ್ ಗಾಂಧಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಈ ಗದ್ದಲದ ಕಾರಣದಿಂದ ಲೋಕಸಭೆ ಕಲಾಪವನ್ನು ಮಧ್ಯಾಹ್ನ 12 ಕ್ಕೆ ಮುಂದೂಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಫೇಲ್ ಡೀಲ್ ಖರೀದಿ ಪ್ರಕರಣದಲ್ಲಿ ತನಿಖೆಗೆ ಆದೇಶ ನೀಡದ ಸುಪ್ರೀಂಕೋರ್ಟ್ ; ಪ್ರಧಾನಿ ಮೋದಿಗೆ ಜಯ