Publish Date: Mon, 10 Dec 2018 (14:45 IST)
Updated Date: Mon, 10 Dec 2018 (14:46 IST)
ಕೊಪ್ಪಳ : ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸಿಎಂ ವಾಸ್ತವ್ಯ ಹೂಡಿರುವುದರ ಕುರಿತು ಬಿಎಸ್ ಯಡಿಯೂರಪ್ಪ ಟೀಕೆ ಮಾಡಿರುವುದಕ್ಕೆ ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕುಮಾರಸ್ವಾಮಿ ಎಲ್ಲಿ ಮಲಗ್ತಾರೆ ಅನ್ನೋದು ಅವರ ವೈಯಕ್ತಿಕ ವಿಚಾರ. ಈ ವಿಷಯವನ್ನು ಯಡಿಯೂರಪ್ಪ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ವಾಸ್ತವ್ಯದ ಕುರಿತು ಮಾತನಾಡೋ ಯಡಿಯೂರಪ್ಪ ಅವರ ವಾಸ್ತವ್ಯದ ಕುರಿತು ಏಕೆ ತುಟಿ ಬಿಚ್ಚುತ್ತಿಲ್ಲ.ಯಡಿಯೂರಪ್ಪ ಸತ್ಯ ಹರಿಶ್ಚಂದ್ರರಾ? ಪ್ರಾಮಾಣಿಕರಾ? ಅವರ ಕಾಲದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸಿಎಂ ಕಮಾರಸ್ವಾಮಿ ವಾಸ್ತವ್ಯದ ಕುರಿತು ಯಡಿಯೂರಪ್ಪ ಪ್ರಶ್ನೆ ಕೇಳಿದರೆ ನಾವು ಅವರ ವಾಸ್ತವ್ಯದ ಕುರಿತು ಪ್ರಶ್ನಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.