Select Your Language

Notifications

webdunia
webdunia
webdunia
webdunia

ಹೆರಿಗೆಗಾಗಿ ತವರು ಮನೆಗೆ ಬಂದ ಪತ್ನಿಯ ಶೀಲ ಶಂಕಿಸಿ ಕತ್ತು ಕೊಯ್ದು ಕೊಲೆ ಮಾಡಿದ ಪಾಪಿ ಪತಿ

ಹೆರಿಗೆಗಾಗಿ ತವರು ಮನೆಗೆ ಬಂದ ಪತ್ನಿಯ ಶೀಲ ಶಂಕಿಸಿ ಕತ್ತು ಕೊಯ್ದು ಕೊಲೆ ಮಾಡಿದ ಪಾಪಿ ಪತಿ
ಕೊಪ್ಪಳ , ಭಾನುವಾರ, 30 ಸೆಪ್ಟಂಬರ್ 2018 (08:46 IST)
ಕೊಪ್ಪಳ : ಪತ್ನಿಯ ಶೀಲ ಶಂಕಿಸಿ ವ್ಯಕ್ತಿಯೊಬ್ಬ ಕುಡಗೋಲಿನಿಂದ  ಆಕೆಯ ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ನಡೆದಿದೆ.


ಯಮನಮ್ಮ(29)  ಕೊಲೆಯಾದ ದುರ್ದೈವಿ, ದುರಗಪ್ಪ ಕೊಲೆ ಮಾಡಿದ ಆರೋಪಿ. ಈ ದಂಪತಿಗೆ ಮದುವೆಯಾಗಿ 8 ವರ್ಷಗಳಾಗಿದ್ದು, ಮೂರು ಜನ ಮಕ್ಕಳಿದ್ದಾರೆ. ಗರ್ಭಿಣಿಯಾಗಿದ್ದ ಯಮನವ್ವ ಹೆರಿಗೆಗೆ ಅಂತಾ ವಿಠಲಾಪುರದ ತವರು ಮನೆಗೆ ಬಂದಿದ್ದರು. ಮೂರು ತಿಂಗಳ ಹಿಂದಷ್ಟೇ ಯಮನವ್ವ ಗಂಡು ಮಗುವಿಗೆ ಜನ್ಮ ನೀಡಿದ್ದರು.


ಗ್ರಾಮದಲ್ಲಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು  ಶಂಕಿಸಿ ವಿಠಲಾಪುರಕ್ಕೆ ಬಂದ ದುರುಗಪ್ಪ, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ಒಳಗೆ ಕರೆದುಕೊಂಡು ಹೋಗಿ ಕುಡಗೋಲಿನಿಂದ ಕುತ್ತು ಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಬಳಿಕ ಅಲ್ಲಿಂದ ನೇರವಾಗಿ ಕನಕಗಿರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಪತಿ ದುರುಗಪ್ಪನನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅ.10ಕ್ಕೆ ಸಂಪುಟ ವಿಸ್ತರಣೆ?