Select Your Language

Notifications

webdunia
webdunia
webdunia
webdunia

ಸಾಲ ತೀರಿಸದ ಸ್ನೇಹಿತನ ಪತ್ನಿಯನ್ನೇ ಮದುವೆಯಾದ! ಪತ್ನಿಗಾಗಿ ಈಗ ಪತಿಯ ಮೊರೆ

ಸಾಲ ತೀರಿಸದ ಸ್ನೇಹಿತನ ಪತ್ನಿಯನ್ನೇ ಮದುವೆಯಾದ! ಪತ್ನಿಗಾಗಿ ಈಗ ಪತಿಯ ಮೊರೆ
ಬೆಳಗಾವಿ , ಗುರುವಾರ, 27 ಸೆಪ್ಟಂಬರ್ 2018 (09:26 IST)
ಬೆಳಗಾವಿ: 500 ರೂ. ಸಾಲ ತೀರಿಸದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಮದುವೆಯಾದ ಪ್ರಕರಣವೊಂದು ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಸಂಬಂಧ ಇದೀಗ ಪೊಲೀಸರು ದಂಪತಿ ನಡುವೆ ರಾಜಿ ಸಂಧಾನ ನಡೆಸಲು ಸಲಹೆ ನೀಡಿದ್ದಾರೆ.  ಆದರೆ ಇದೀಗ ಪತ್ನಿ ಪಾರ್ವತಿ ಮೊದಲ ಪತಿಯೊಂದಿಗೆ ಹೋಗಲು ಒಪ್ಪುತ್ತಿಲ್ಲ. ಇತ್ತ ಮೊದಲ ಪತಿ ತನಗೆ ಪತ್ನಿ ಬೇಕೆಂದು ಪೊಲೀಸರ ಮುಂದೆ ಮೊರೆಯಿಡುತ್ತಿದ್ದಾನೆ.

ಬಸವರಾಜ ಕೋನನ್ನವರ ಮತ್ತು ರಮೇಶ ಉಡಕೇರಿ ಎಂಬಿಬ್ಬರು ಸ್ನೇಹಿತರು ಬೆಳಗಾವಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಸವರಾಜ ರಮೇಶನಿಂದ 500 ರೂ. ಸಾಲ ಪಡೆದಿದ್ದ.

ಆದರೆ ಸಾಲ ಪಾವತಿಸದ ಕಾರಣ ಅದೇ ನೆಪವೊಡ್ಡಿ ರಮೇಶ ಎರಡು ತಿಂಗಳ ಹಿಂದೆ ಬಸವರಾಜನ ಪತ್ನಿ ಪಾರ್ವತಿಯನ್ನು ಪುಸಲಾಯಿಸಿ ಮದುವೆಯಾಗಿದ್ದ ಎನ್ನುವುದು ಆರೋಪ. ಈ ಬಗ್ಗೆ ಬಸವರಾಜ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಪತ್ನಿಯನ್ನೂ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪಾರ್ವತಿ ಮೊದಲ ಪತಿ ಬಸವರಾಜನೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಹೀಗಾಗಿ ಇದೊಂದು ಕೌಟುಂಬಿಕ ಕಲಹವಾಗಿದ್ದು, ನೀವೇ ಪರಿಹರಿಸಿಕೊಳ್ಳಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಮರ ಪ್ರಾರ್ಥನೆಗೆ ಮಸೀದಿ ಬೇಕೆ? ಸುಪ್ರೀಂ ಕೋರ್ಟ್ ನಲ್ಲಿ ಇಂದು ಮಹತ್ವದ ತೀರ್ಪು