Select Your Language

Notifications

webdunia
webdunia
webdunia
webdunia

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗನಿಂದ ಶಾಸಕ ಸತೀಶ್ ಜಾರಕಿಹೊಳಿ‌ ಬೆಂಬಲಿಗನ ಹತ್ಯೆಗೆ ಯತ್ನ?

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗನಿಂದ ಶಾಸಕ ಸತೀಶ್ ಜಾರಕಿಹೊಳಿ‌ ಬೆಂಬಲಿಗನ ಹತ್ಯೆಗೆ ಯತ್ನ?
ಬೆಳಗಾವಿ , ಶುಕ್ರವಾರ, 28 ಸೆಪ್ಟಂಬರ್ 2018 (14:45 IST)
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗನಿಂದ ಶಾಸಕ ಸತೀಶ್ ಜಾರಕಿಹೊಳಿ‌ ಬೆಂಬಲಿಗನ ಹತ್ಯೆಗೆ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಬೆಳಗಾವಿ ತಾಲ್ಲೂಕಿನ ಮಾರಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಾಸಕ ಸತೀಶ್ ಬೆಂಬಲಿಗ  ಆಸೀಪ್  ಮುಲ್ಲಾ ಮೇಲೆ ಹೆಬ್ಬಾಳಕರ್ ರ ಬೆಂಬಲಿಗ ತೌಶೀಪ್ ಫಣಿಬಂಧ ಎಂಬಾತನೆ  ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.  ಇವರಿಬ್ಬರೂ ದೂರದ ಸಂಬಂಧಿಗಳಾಗಿದ್ದು,  ಸಂಜೆ ಅದೇ ಗ್ರಾಮದ ಬೇರೊಬ್ಬರ ಶವಸಂಸ್ಕಾರಕ್ಕೆ ಹೋದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಆಗ  ತೌಶೀಪ್ ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆಶೀಪ್ ಆರೋಪಿಸಿದ್ದು, ಹಿಂದಿನಿಂದ ಬಂದು ಹಲ್ಲೆ ಮಾಡಲು ಮುಂದಾದಾಗ ತಪ್ಪಿಸಿಕೊಳ್ಳಲು ಹೋಗಿ ಎಡಗೈನ ಮೂರು ಬೆರಳುಗಳಿಗೆ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಗಾಯಗೊಂಡ ಆಶೀಪನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಶೀಪ್ ಆರೋಗ್ಯವಾಗಿದ್ದಾನೆ.

ಹಲ್ಲೆ‌ ಮಾಡಿದ ತೌಶೀಪ್  ಪರಾರಿಯಾಗಿದ್ದಾನೆ. ಇವರಿಬ್ಬರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದು. ತೌಶೀಪ್ ಮಾರಿಹಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾಗಿದ್ದಾನೆ. ತೌಶೀಪ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಸಚಿವ ರಮೇಶ ಜಾರಕಿಹೊಳಿ ಪರಮಾಪ್ತನು ಹೌದು. ಅಸಲಿಯಾಗಿ ಆಶೀಪ್ ಮೋಹರಂ ಹಬ್ಬದಂದು ಮಾರಿಹಾಳ ಗ್ರಾಮದಲ್ಲಿ ಕವಾಲಿ ಕಾರ್ಯಕ್ರಮ ಏರ್ಪಡಿಸಿರುತ್ತಾನೆ. ಆಗ ಗ್ರಾಮದಲ್ಲಿ ಹಾಕಿದ್ದ ಬ್ಯಾನರಗಳ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿರುತ್ತದೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ 307 ಕೇಸ್ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮೆಡಿಕಲ್ಸ್ ಬಂದ್ ಗೆ ನೀರಸ ಪ್ರತಿಕ್ರಿಯೆ