Publish Date: Fri, 28 Sep 2018 (09:36 IST)
Updated Date: Fri, 28 Sep 2018 (09:37 IST)
ತ್ರಿಪುರಾ: ನೆರೆ ಮನೆಯವನ ಜತೆ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿ ಮನಬಂದಂತೆ ಅವಮಾನಗೊಳಿಸಿದ ಘಟನೆ ತ್ರಿಪುರಾದಲ್ಲಿ ನಡೆದಿದೆ.
ಅಕ್ರಮ ಸಂಬಂಧ ಹೊಂದಿದ್ದ 40 ವರ್ಷದದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿದ ಸಾರ್ವಜನಿಕರು ಆಕೆಗೆ ಥಳಿಸಿ ಚಪ್ಪಲಿಯ ಹಾರ ಹಾಕಿದ್ದಾರೆ. ಈ ಬಗ್ಗೆ ಇದೀಗ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಈಕೆಗೆ ತನ್ನ ಮೊದಲ ವಿವಾಹದಿಂದ ಇಬ್ಬರು ಮಕ್ಕಳೂ ಇದ್ದಾರೆ ಎನ್ನಲಾಗಿದೆ. ವಿಪರ್ಯಾಸವೆಂದರೆ ಈಕೆ ಸಂಬಂಧ ಹೊಂದಿದ್ದ ವ್ಯಕ್ತಿಯೂ ಎರಡು ದಿನಗಳ ಹಿಂದಷ್ಟೇ ತನ್ನ ಪತ್ನಿಯ ಕೊಲೆ ಸಂಬಂಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಇದೀಗ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಗೆ ಥಳಿಸಿದವರನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.