ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಯಾವತ್ತೂ ಬೆಂಬಲವಾಗಿ ನಿಲ್ಲುತ್ತಾರೆ. ಆದರೆ ಅನುಷ್ಕಾ ಲೇಟೆಸ್ಟ್ ಸಿನಿಮಾ ಸೂಯಿ ದಾಗ ವಿಚಾರದಲ್ಲಿ ಮಾತ್ರ ಕೊಹ್ಲಿ ನಡೆದುಕೊಂಡಿದ್ದು ನೋಡಿದರೆ ಅಚ್ಚರಿಯಾಗಬಹುದು.
ನಿನ್ನೆಯಷ್ಟೇ ಬಿಡುಗಡೆಯಾಗಿರುವ ಅನುಷ್ಕಾ-ವರುಣ್ ಧವನ್ ಅಭಿನಯದ ಸೂಯಿ ದಾಗ್ ಸಿನಿಮಾವನ್ನು ಕೊಹ್ಲಿ ಎರಡು ಬಾರಿ ನೋಡಿದ್ದಾರಂತೆ! ಅದರಲ್ಲೂ ಎರಡನೇ ಬಾರಿ ಅವರಿಗೆ ಸಿನಿಮಾ ಮತ್ತಷ್ಟು ಹೆಚ್ಚು ಇಷ್ಟವಾಗಿದೆಯಂತೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ ‘ಎಂತಹಾ ಇಮೋಷನಲ್ ಸಿನಿಮಾ ಇದು. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಮಮತಾ ಪಾತ್ರ ನನ್ನ ಹೃದಯ ಕದ್ದಿತು. ಎಂತಹಾ ಅದ್ಭುತ ಅಭಿನಯ. ಎಂತಹಾ ಪವರ್ ಫುಲ್ ಕ್ಯಾರೆಕ್ಟರ್ ಅದು. ಅಭಿನಂದನೆಗಳು ಮೈ ಲವ್ ಅನುಷ್ಕಾ. ಯಾರೂ ಮಿಸ್ ಮಾಡಬೇಡಿ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.