Publish Date: Wed, 26 Sep 2018 (09:00 IST)
Updated Date: Wed, 26 Sep 2018 (09:01 IST)
ನವದೆಹಲಿ: ವಿರಾಟ್ ಕೊಹ್ಲಿ ಆಧುನಿಕ ಯುಗದ ಅತ್ಯುತ್ತಮ ಬ್ಯಾಟ್ಸ್ ಮನ್ ಎನ್ನುವುದರಲ್ಲಿ ಸಂಶಯವಿಲ್ಲ. ಅವರು ಕೆಲವೊಮ್ಮೆ ಬ್ಯಾಟಿಂಗ್ ಮಾಡುವಾಗ ಹೇಗಿರುತ್ತಾರೆ ಎನ್ನುವ ಅಚ್ಚರಿಯ ಅಂಶವೊಂದನ್ನು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
‘ಕೆಲವೊಮ್ಮೆ ನಾನು ಬೌಲರ್ ನ ಮುಖ ಕೂಡಾ ನೋಡಲ್ಲ. ಕೇವಲ ಆತನ ಕೈಯಲ್ಲಿರುವ ಬಾಲ್ ಕಡೆಗೆ ಏಕಾಗ್ರತೆ ವಹಿಸುತ್ತೇನೆ. ಬಾಲ್ ಬರುವುದತ್ತ ಮಾತ್ರ ನನ್ನ ದೃಷ್ಟಿ ನೆಟ್ಟಿರುತ್ತದೆ’ ಎಂಬ ಅಚ್ಚರಿಯ ಅಂಶವನ್ನು ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ತಮ್ಮ ತಂದೆಯ ಸಾವಿನ ದಿನವನ್ನೂ ಅವರು ಸ್ಮರಿಸಿಕೊಂಡಿದ್ದಾರೆ. ದೆಹಲಿ ತಂಡಕ್ಕಾಗಿ ರಣಜಿ ಪಂದ್ಯವಾಡುವ ದಿನವೇ ಅವರ ತಂದೆ ಸಾವಿಗೀಡಾಗಿದ್ದರು. ಹಾಗಿದ್ದರೂ ಪಂದ್ಯ ಮುಗಿಸಿ ತಂದೆಯ ಅಂತ್ಯಕ್ರಿಯೆಗೆ ತೆರಳಿದ್ದರು ಕೊಹ್ಲಿ. ಆ ದಿನದ ಬಳಿಕ ನಾನು ಹೆಚ್ಚು ಏಕಾಗ್ರತೆ ವಹಿಸಲು ಪ್ರಾರಂಭಿಸಿದೆ. ನನ್ನ ಕನಸು, ನನ್ನ ತಂದೆಯ ಕನಸು ಒಂದೇ ಎಂದು ಪರಿಶ್ರಮಪಡಲಾರಂಭಿಸಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.