Publish Date: Thu, 01 Dec 2022 (18:15 IST)
Updated Date: Thu, 01 Dec 2022 (18:18 IST)
ರೌಡಿ ಶೀಟರ್ ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ವಿಚಾರವಾಗಿ ಬಿಜೆಪಿ ನಾಯಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಶುರುವಾಗಿದೆ.ರೌಡಿಶೀಟರ್ ಗಳ ರೀತಿಯಲ್ಲೇ ಸಚಿವರಿಗೂ ಹೆಸರಿಟ್ಟು ಲೇವಡಿ ಮಾಡಲಾಗಿದೆ.ರೇಪ್ ರಮೇಶ, ಸೆಕ್ಸಿ ಸುಧಾಕರ, ಸ್ಟ್ರಾಂಗ್ ಸದಾ ಎಂದು ಅಪಹಾಸ್ಯ ಮಾಡಲಾಗಿದೆ.ಬ್ಲೇಡ್ ಅಶೋಕ, ನಟೋರಿಯಸ್ ನಾರಾಯಣ, ಡ್ರಾಗರ್ ಪ್ರತಾಪ ಎಂದು ವ್ಯಂಗ್ಯ ಮಾಡಿದ್ದು,ಸಿಎಂ ಬೊಮ್ಮಾಯಿಗೆ ಬಾಂಬೆ ಬೊಮ್ಮಣ್ಣ ಎಂದು ಅಪಹಾಸ್ಯ ಮಾಡಿ ಪೋಸ್ಟರ್ ಹಾಕಿದ್ದಾರೆ.ಮುಂದೊಂದು ದಿನ ಬಿಜೆಪಿ ನಾಯಕರ ಹೆಸರುಗಳು ಹೀಗಿರಬಹುದು ಎಂದು ಲೇವಡಿ ಮಾಡಿದ್ದು ,ಪಾತಕಿಗಳ ತವರುಮನೆ ಬಿಜೆಪಿಯಾಗುತ್ತಿದೆ ಎಂದು ಪೋಸ್ಟರ್ ಮೂಲಕ ಕಿಡಿಕಾರಿದ್ದಾರೆ.