Select Your Language

Notifications

webdunia
webdunia
webdunia
webdunia

ರಾಜಕೀಯ ಲಾಭಕ್ಕೆ ಗಡಿವಿವಾದ ಬಳಕೆ ಮಾಡಿಕೊಳ್ತಿದ್ದಾರೆಂದು ಡಿಕೆಶಿ ಆರೋಪ

ರಾಜಕೀಯ ಲಾಭಕ್ಕೆ ಗಡಿವಿವಾದ ಬಳಕೆ ಮಾಡಿಕೊಳ್ತಿದ್ದಾರೆಂದು ಡಿಕೆಶಿ ಆರೋಪ
bangalore , ಗುರುವಾರ, 1 ಡಿಸೆಂಬರ್ 2022 (15:27 IST)
ರಾಜಕೀಯ ಲಾಭಕ್ಕೆ ಗಡಿವಿವಾದ ಎಂದು ಕರ್ನಾಟಕ, ಮಹಾರಾಷ್ಟ್ರ ಸರ್ಕಾರದ ವಿರುದ್ದ ಎಂದು ಡಿಕೆಶಿ ಆರೋಪಿಸಿದಾರೆ.ಗಡಿ ವಿಚಾರದಲ್ಲಿ ಎಲ್ಲರೂ ಕೂಡ ರಾಜಕಾರಣ ಮಾಡ್ತಿದ್ದಾರೆ.ಚುನಾವಣಾ ಹೊತ್ತಲ್ಲಿ ಶಾಂತಿ ಇರುವ ರಾಜ್ಯದಲ್ಲಿ ಶಾಂತಿ ಕದಲಿಸುವ ಪ್ರಯತ್ನ ಮಾಡ್ತಿದ್ದಾರೆ.ಯಾವುದೇ ಪಕ್ಷವಾಗಿದ್ದರೂ ಮಹಾರಾಷ್ಟ್ರ ಸರ್ಕಾರ ಮಾಡ್ತಿರೋದು ತಪ್ಪು.ನಮ್ಮ ರಾಜ್ಯದ ಸಿಎಂ ಅವರ ಸರ್ಕಾರದ ಮೇಲಿನ ಕೆಟ್ಟ ಹೆಸರನ್ನು ವಿಷಯಾಂತರ ಮಾಡೋಕೆ ದೊಡ್ಡದು ಮಾಡ್ತಿದ್ದಾರೆ.ಇದು ಆಗಲೇ ನಿರ್ಧಾರವಾಗಿರುವ ವಿಚಾರ.ಅವರದು ಗಡಿ ಅವರದು,ನಮ್ಮ ಗಡಿ ನಮ್ಮದು,ಇಲ್ಲಿರುವವರು ನಮ್ಮ ಜನ,ಅಲ್ಲಿರುವವರು ಅವರ ಜನ.ಭಾಷೆ ವಿಚಾರಕ್ಕೆ ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗೆ ಅವರು ಪ್ರೋತ್ಸಾಹ ಕೊಡಬೇಕು.ಇಲ್ಲಿರುವ ಮರಾಠಿ ಶಾಲೆಗಳಿಗೆ ನಾವು ಪ್ರೋತ್ಸಾಹ ಕೊಡಬೇಕು.ಅಕ್ಕಪಕ್ಕದ ವ್ಯಾಪಾರ,ವಹಿವಾಟುಗೆ ತೊಂದರೆಯಾಗಬಾರದು.ಸುವರ್ಣಸೌಧವನ್ನು ಕೂಡ ಬೆಳಗಾವಿಯಲ್ಲಿ ಕಟ್ಟಿದ್ದೇವೆ.‌ನಮ್ಮ ಶಾಂತಿಭಂಗಮಾಡುವ ಕೆಲಸ ಆಗಬಾರದು ಎಂದು  ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಟಿ ವಿಲೇಜ್ ರೆಸ್ಟೋರೆಂಟ್ ನ ಗಲಾಟೆ-ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ತನಿಖೆ