Select Your Language

Notifications

webdunia
webdunia
webdunia
webdunia

ಸಿಟಿ ವಿಲೇಜ್ ರೆಸ್ಟೋರೆಂಟ್ ನ ಗಲಾಟೆ-ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ತನಿಖೆ

City Village Restaurant commotion
bangalore , ಗುರುವಾರ, 1 ಡಿಸೆಂಬರ್ 2022 (15:18 IST)
ಸಿಟಿ ವಿಲೇಜ್ ರೆಸ್ಟೋರೆಂಟ್ ನಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಪ್ರತಿಕ್ರಿಯಿಸಿದ್ದಾರೆ,ನವೆಂಬರ್ 20ರ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ರೆಸ್ಟೋರೆಂಟ್ ನಲ್ಲಿ ಗಲಾಟೆಯಾಗಿದೆ.21ನೇ ತಾರೀಖು ಬೆಳಿಗ್ಗೆ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬರ್ತ್ ಡೇ ಪಾರ್ಟಿಯ ಸಲುವಾಗಿ ಆರೋಪಿಗಳು‌ ಬಂದಿದ್ದಾರೆ.11:30ಕ್ಕೆ ಬಂದಿದಾರೆ ಆದ್ರೆ ಲಾಸ್ಟ್ ಆರ್ಡರ್ 11 ಗಂಟೆಗೆ ಅಂತಾ ರೆಸ್ಟೋರೆಂಟ್ ನವರು ಹೇಳಿದಾರೆ.ಆ ಸಂದರ್ಭದಲ್ಲಿ ಆರೋಪಿಗಳು, ರೆಸ್ಟೋರೆಂಟ್ ನವರ ನಡುವೆ ತಳ್ಳಾಟ-ನೂಕಾಟಗಳಾಗಿದೆ .ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ತನಿಖೆ ಆರಂಭಿಸಲಾಯಿತು ಎಂದು ಹೇಳಿದ್ದಾರೆ.
 
ಅಲ್ಲದೆ ಮೊದಲು ಆರೋಪಿಗಳ ಮಾಹಿತಿ ಲಭ್ಯವಾಗಿರಲಿಲ್ಲ.ನಂತರ ಹುಡುಕಾಟ ನಡೆಸಿ ಇದುವರೆಗೂ 7 ಜನ ಆರೋಪಿಗಳ ಬಂಧನವಾಗಿದೆ.ಇನ್ನುಳಿದ ಆರೋಪಿಗಳಿಗಾಗಿ ಶೋಧ ಮಾಡಲಾಗುತ್ತಿದೆ.ಆರೋಪಿಗಳು ಯಾರೇ ಇರಲಿ ಕಾನೂನು ಕ್ರಮ ಜರುಗಿಸಲಾಗುವುದು.ಆದಷ್ಟು ಬೇಗ ಉಳಿದ ಆರೋಪಿಗಳನ್ನ ಬಂಧಿಸಲಾಗುವುದು ಎಂದು ಡಿಸಿಪಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ದಂಗಾದ ವೈದ್ಯರು