Publish Date: Thu, 01 Dec 2022 (07:18 IST)
Updated Date: Thu, 01 Dec 2022 (08:51 IST)
ಬೆಂಗಳೂರು : ಆಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಕಂಪನಿಯನ್ನ ಖರೀದಿಸಲು ಟಾಟಾ ಸಮೂಹ ಉತ್ಸಾಹ ತೋರಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಘಟಕದ ಖರೀದಿಗೆ ಟಾಟಾ ಸಮೂಹ ಆಸಕ್ತಿ ತೋರಿದೆ.
ಸುಮಾರು 4,000 ರಿಂದ 5,000 ಕೋಟಿ ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ ತಯಾರಿಸುವ ದೇಶದ ಮೂರು ಪ್ರಮುಖ ಘಟಕಗಳಲ್ಲಿ ಒಂದಾಗಿದೆ.
ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ದೇಶದಲ್ಲಿ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ.