Select Your Language

Notifications

webdunia
webdunia
webdunia
webdunia

ಡ್ರಗ್ಸ್ ಸೇವನೆ ಮಾಡ್ತಿದ್ದ ಅಪಾರ್ಟ್ಮೆಂಟ್ ಮೇಲೆ ಎನ್ ಸಿ ಬಿ ಅಧಿಕಾರಿಗಳ ದಾಳಿ

NCB officials raided the apartment where drugs were consumed
bangalore , ಗುರುವಾರ, 1 ಡಿಸೆಂಬರ್ 2022 (18:08 IST)
ಮಡಿವಾಳ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ವೊಂದರ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಜೋಲೋ ಡೆಸ್ಟಿನಿ ಮ್ಯಾನೇಜಿಂಗ್ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದು,ಅಪಾರ್ಟ್ಮೆಂಟ್ ನಲ್ಲಿ ವಾಸಿಸ್ತಿದ್ದ ಕೆಲ ಯುವತಿಯರು ಡ್ರಗ್ ಸೇವನೆ ಮಾಡ್ತಿದ್ದ ಪಕ್ಕಾ ಮಾಹಿತಿ‌ ಆಧರಿಸಿ  ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
 
ದಾಳಿ ವೇಳೆ ಉತ್ತರಭಾರತ ಮೂಲದ ಮೂವರು ಯುವತಿಯರನ್ನ ಎನ್ ಸಿ ಬಿ ಪೊಲೀಸರು ವಶಪಡೆದಿದ್ದಾರೆ.ಮೂವರಲ್ಲಿ ಓರ್ವ ಯುವತಿ ಡಾರ್ಕ್ ವೆಬ್ ಗೂ ಲಿಂಕ್ ಇರೋ ಮಾಹಿತಿ ಇದೆ.ಡಾರ್ಕ್ ವೆಬ್ ಮೂಲಕ ಯುವತಿ ಡ್ರಗ್ ತರಿಸಿಕೊಳ್ತಿದ್ದಳು.ಎಮ್ ಬಿಎ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿ ಅಪಾರ್ಟ್ಮೆಂಟ್ ನಲ್ಲಿ ಡ್ರಗ್ ಸೇವನೆ ಮಾಡ್ತಿದ್ದ ಮಾಹಿತಿ ಸಿಕ್ಕಿತ್ತು.ಈ ಹಿನ್ನೆಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
 
ಒಂದು ಇನೋವಾ, ಎರಡು ಬುಲೆರೋ ವಾಹನಗಳಲ್ಲಿ ಬಂದು ದಾಳಿ ಮಾಡಿದ್ದು,ಸದ್ಯ ಮೂವರನ್ನೂ ವಶಪಡೆದು ಹೆಚ್ಚಿನ ವಿಚಾರಣೆ  ಎನ್ ಸಿ ಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಲಾಭಕ್ಕೆ ಗಡಿವಿವಾದ ಬಳಕೆ ಮಾಡಿಕೊಳ್ತಿದ್ದಾರೆಂದು ಡಿಕೆಶಿ ಆರೋಪ