ಎಂಬಿಬಿಎಸ್ ವಿದ್ಯಾರ್ಥಿಗಳು ಒಂದೆರಡು ಅಂಕಗಳಲ್ಲಿ ಫೇಲ್ ಆಗ್ತಿದಾರೆ.ಬರೋಬ್ಜರಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಅಂಕದೊಳಗೆ ಫೇಲ್ ಆಗ್ತಿದ್ದು,ಮೊದಲ ವರ್ಷದ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಾರೀ ಅನ್ಯಾಯವಾಗಿದೆ.ಕೊರ್ಟ್ ಸೂಚನೆ ನೀಡಿದ್ರೂ ಮೀನಾಮೇಷ ಎಣಿಸುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಸಚಿವ.ಪ್ರತಿಭಾವಂತ ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ಫೇಲ್ ಆಗ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.ಪಾಸ್ ಮಾಡಲು ಬ್ರೋಕರ್ ಮೂಲಕ ಲಕ್ಷ ಲಕ್ಷ ಬೇಡಿಕೆಯ ಆರೋಪವನ್ನ ವಿದ್ಯಾರ್ಥಿ, ಪೋಷಕರು ವಿವಿ ಮೇಲೆ ಮಾಡಿದ್ದಾರೆ.
ಅನ್ಯಾಯಕ್ಕೊಳಗಾದ 144 ಎಂಬಿಬಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದು,ಒಂದು ಪತ್ರಿಕೆಗೆ ಇಬ್ಬರು ಮೌಲ್ಯಮಾಪಕರಿಂದ ವ್ಯಾಲ್ಯುವೇಷನ್ ನಡೆಯುತ್ತೆ.ಇದರಲ್ಲಿ ಯಾರು ಹೆಚ್ಚು ಅಂಕ ನೀಡಿದ್ದಾರೋ ಅದನ್ನು ಪರಿಗಣಿಸುವಂತೆ ವಿವಿಗೆ ಹೈಕೋರ್ಟ್ ಸೂಚನೆ ನೀಡಿದೆ.ಹೈಕೋರ್ಟ್ ಸೂಚಿಸಿದ್ರೂ ರಾಜೀವ್ ಗಾಂಧಿ ಆರೋಗ್ಯ ವಿವಿ ಪಾಲನೆ ಮಾಡಿಲ್ಲ.ಆದೇಶವಾದ 15 ದಿನದ ಬಳಿಕ ವಿವಿ ಇದೀಗ ಮೇಲ್ಮನವಿ ಹೋಗಿದೆ.ಮುಂದಿನ ವರುಷದಿಂದ ವಿವಿ ಪರೀಕ್ಷಾ ವಿಭಾಗ ಕುಲಸಚಿವ ಜಾರಿಗೆ ತರುತ್ತಿದೇವೆ ಎನ್ನುತ್ತಿದ್ದು,ಇನ್ನೂ ಈ ವಿಚಾರವಾಗಿ ಇಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡ್ತಿದ್ದು.200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಿ ಎಂದು ಒತ್ತಾಯಿಸಿ ರಾಜೀವ್ ಗಾಂಧಿ ವಿವಿ ಮುಂದೆ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.