Publish Date: Mon, 25 Apr 2022 (21:00 IST)
Updated Date: Mon, 25 Apr 2022 (21:02 IST)
ಹಿಜಾಬ್, ಹಲಾಲ್ ಕಟ್, ಆಜಾನ್ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಶುರುವಾಗಿದೆ..ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಕ್ರೈಸ್ತ ಧರ್ಮದ ಹೇರಿಕೆ ಆರೋಪ ಕೇಳಿ ಬಂದಿದ್ದು ಶಾಲಾ ಆಡಳಿತ ಮಂಡಳಿ ನಿರ್ಧಾರದ ವಿರುದ್ದ ಹಿಂದೂ ಜನಜಾಗೃತಿ ಸಮಿತಿ ಸಿಡಿದೆದ್ದಿದೆ..ಹಿಂದೂ ಪರ ಸಂಘಟನೆಗಳು ಈಗಾಗಲೇ ದೂರವಾಣಿ ಮೂಲಕ ಶಿಕ್ಷಣ ಸಚಿವರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ರಿಚರ್ಡ್ ಟೌನ್ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ..ಯಾವುದೇ ಧರ್ಮದ ಬಗ್ಗೆ ಪಾಠ-ಪ್ರವಚನ ಮಾಡುವಂತಿಲ್ಲ. ಪಠ್ಯದಲ್ಲಿ ಧರ್ಮದ ಒಂದು ಭಾಗವನ್ನು ಇಡಬಹುದು ಅಷ್ಟೆ..ಆದ್ರೆ ಬೈಬಲ್ ಓದುವುದನ್ನು ಕಡ್ಡಾಯಗೊಳಿಸಿದ್ರೆ ಪರಿಶೀಲಿಸಿ ಕ್ರಮ ಜರುಗಿಸೋದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.