ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನವನ್ನು ಮಿಲನಾ-ಡಾರ್ಲಿಂಗ್ ಕೃಷ್ಣ ದಂಪತಿ ವಿಶೇಷವಾಗಿ ಆಚರಿಸಿದ್ದಾರೆ.
ಲವ್ ಮಾಕ್ಟೇಲ್ 2 ಸಕ್ಸಸ್ ಬಳಿಕ ಬ್ರೇಕ್ ಪಡೆದುಕೊಂಡಿರುವ ಈ ಜೋಡಿ ಈಗ ಸಿಂಗಾಪುರ್ ನಲ್ಲಿ ಹಾಲಿಡೇ ಮೂಡ್ ನಲ್ಲಿದೆ. ಕೆಲವು ದಿನಗಳಿಂದ ಇಲ್ಲಿ ರಜಾ ಮಜಾ ಮಾಡುತ್ತಿದ್ದಾರೆ.
ಇಂದು ಮಿಲನಾ ಹುಟ್ಟುಹಬ್ಬದ ನಿಮಿತ್ತವೇ ಕೃಷ್ಣ ಸಿಂಗಾಪುರಕ್ಕೆ ಕರೆದೊಯ್ದಿದ್ದಾರೆ. ಈ ಕ್ಷಣಗಳನ್ನು ಮಿಲನಾ ಹಾಗೂ ಕೃಷ್ಣ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.