ಬೆಂಗಳೂರು: ಹನಿಟ್ರ್ಯಾಪ್ ಮಾಡಲು ಬಂದ ಯುವತಿಯರ ಬಗ್ಗೆ ಸಚಿವ ಕೆಎನ್ ರಾಜಣ್ಣ ಮಾಹಿತಿ ನೀಡಿದ್ದಾರೆ. ಪರ್ಸನಲ್ ಆಗಿ ಮಾತನಾಡಬೇಕು ಎಂದು ಬಂದವಳು ಮಾಡಿದ್ದೇನು ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎನ್ ರಾಜಣ್ಣ ಹನಿಟ್ರ್ಯಾಪ್ ಬಗ್ಗೆ ಹಲವು ಮಾಹಿತಿ ಬಿಚ್ಚಿಟ್ಟಿದ್ದಾರೆ. ತಮ್ಮನ್ನು ಯುವತಿ ಎರಡು ಬಾರಿ ಮೀಟ್ ಮಾಡಲು ಬಂದಿದ್ದು ನಿಜ ಎಂದು ಹೇಳಿದ್ದಾರೆ. ಆಕೆಯ ವೇಷಭೂಷಣದ ಮಾಹಿತಿಯೂ ನೀಡಿದ್ದಾರೆ.
ನನ್ನನ್ನು ನೋಡಲು ಬಂದ ಯುವತಿ ಬ್ಲೂ ಜೀನ್ಸ್ ಹಾಕಿಕೊಂಡು ಬಂದಿದ್ದಳು. ಎರಡು ಬಾರಿ ಬಂದಾಗ ಹುಡುಗಿಯರು ಬೇರೆ ಬೇರೆ ಆಗಿದ್ದರು. ಎರಡನೇ ಬಾರಿ ಬಂದಾಗ ಹೈಕೋರ್ಟ್ ಲಾಯರ್ ಎಂದಿದ್ದಳು. ಮೊದಲ ಬಾರಿ ಹೇಳಿರಲಿಲ್ಲ ಎಂದಿದ್ದರು.
ನಂತರ ಬಂದವಳು ಪರ್ಸನಲ್ ಆಗಿ ನಿಮ್ಮ ಜೊತೆ ಗುಟ್ಟಾಗಿ ಮಾತನಾಡಬೇಕು ಎಂದಳು ಎಂದಿದ್ದಾರೆ. ಇನ್ನು ದೂರು ಯಾವಾಗ ಕೊಡ್ತೀರಿ ಎಂದಿದ್ದಕ್ಕೆ, ಇಷ್ಟು ದಿನ ಬ್ಯುಸಿಯಿದ್ದಿದ್ದರಿಂದ ದೂರು ಕೊಡಲು ಆಗಲಿಲ್ಲ. ಈವತ್ತು ಬೆಳಿಗ್ಗೆಯಿಂದ ಕೂತು ಬರೆದಿದ್ದೇನೆ. ಈವತ್ತೇ ಗೃಹಸಚಿವರು ಎಲ್ಲಿ ಇರುತ್ತಾರೋ ಅಲ್ಲೇ ಹೋಗಿ ದೂರು ಕೊಡುತ್ತೇನೆ ಎಂದಿದ್ದಾರೆ. ಹೀಗಾಗಿ ಹನಿಟ್ರ್ಯಾಪ್ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಗಲಿದೆ.