Publish Date: Fri, 01 Sep 2017 (20:39 IST)
Updated Date: Fri, 01 Sep 2017 (20:42 IST)
ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತನ ಮೊಬೈಲ್ ರಿಂಗ್ ಆಗಿದ್ದರಿಂದ ಕೆಂಡಾಮಂಡಲವಾದ ಸಚಿವ ಅಂಜನೇಯ, ಒದ್ದು ಓಡಿಸಲೇ ಅವ್ನ ಎಂದು ಗುಡುಗಿದ ಘಟನೆ ನಡೆಯಿತು.
ಮಾಧ್ಯಮದವರಿಗೆ ಸಮಾಜ ಕಲ್ಯಾಣ ಖಾತೆ ಸಚಿವ ಎಚ್. ಅಂಜನೇಯ ಗಂಭೀರವಾಗಿ ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತನ ಮೊಬೈಲ್ ರಿಂಗ್ ಸದ್ದಾಗಿದೆ. ಇದರಿಂದ ಗರಂ ಆದ ಸಚಿವರು ಯಾವನೋ ಅವನು ಒದ್ದು ಓಡಿಸೋ ಅವ್ನ ಎಂದು ಕೆಂಡಕಾರಿದ್ದಾರೆ.
ಕಾರ್ಯಕರ್ತನನ್ನು ಒದ್ದು ಓಡಿಸೋ ಎಂದು ಗುಡುಗಿದ ಸಚಿವ ಅಂಜನೇಯ ವರ್ತನೆ ಕೆಲ ಕಾರ್ಯಕರ್ತರಿಗೆ ಇರಿಸು ಮುರಿಸು ಉಂಟು ಮಾಡಿತು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.