Select Your Language

Notifications

webdunia
webdunia
webdunia
webdunia

ಇಂದು ಸಂಜೆ ನೂತನ ಸಚಿವರ ಪ್ರಮಾಣ ವಚನ: ಯಾರಿಗೆ ಯಾವ ಖಾತೆ?

ಇಂದು ಸಂಜೆ ನೂತನ ಸಚಿವರ ಪ್ರಮಾಣ ವಚನ: ಯಾರಿಗೆ ಯಾವ ಖಾತೆ?
ಬೆಂಗಳೂರು , ಶುಕ್ರವಾರ, 1 ಸೆಪ್ಟಂಬರ್ 2017 (09:13 IST)
ಬೆಂಗಳೂರು: ರಾಜ್ಯಸಚಿವ ಸಂಪುಟದಲ್ಲಿ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಶುಭ ಸುದ್ದಿ ಸಿಕ್ಕಿದೆ. ತೆರವಾಗಿರುವ ಸಚಿವ ಸ್ಥಾನಗಳಿಗೆ ಹೊಸಬರನ್ನು ಆಯ್ಕೆ ಮಾಡಲಾಗಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

 
ಜಿ. ಪರಮೇಶ್ವರ್ ರಿಂದ ತೆರವಾದ ಗೃಹ ಖಾತೆ ಮೇಲೇ ಎಲ್ಲರ ಕಣ್ಣಿದ್ದು, ಅರಣ್ಯ ಸಚಿವ ರಮಾನಾಥ ರೈಗೆ ಈ ಹುದ್ದೆ ಸಿಕ್ಕುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಎಚ್. ಎಂ. ರೇವಣ್ಣಗೆ ಅರಣ್ಯ ಖಾತೆ, ಗೀತಾ ಮಹದೇವ ಪ್ರಸಾದ್ ಗೆ ಸಹಕಾರ ಖಾತೆ, ಆರ್ ಬಿ ತಿಮ್ಮಾಪುರ ಅಬಕಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ನಿಚ್ಚಳವಾಗಿದೆ.

ಇಂದು ಸಂಜೆ 5 ಗಂಟೆಗೆಎ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಸಚಿವರು ಸಂಪುಟ ಸೇರುವುದರೊಂದಿಗೆ ಸಿದ್ದರಾಮಯ್ಯ ಸರ್ಕಾರದ ಸಂಪುಟ ಸಂಪೂರ್ಣ ಭರ್ತಿಯಾಗಲಿದೆ.

ಇದನ್ನೂ ಓದಿ.. ಲಂಕಾಗೆ ವೈಟ್ ವಾಶ್ ಮಾಡಲು ಟೀಂ ಇಂಡಿಯಾಗೆ ಇನ್ನೊಂದೇ ಮೆಟ್ಟಿಲು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಜತೆಗೆ ಗಡಿಯಲ್ಲಿ ಅಡ್ಜಸ್ಟ್ ಮಾಡಿಕೊಳ್ತೀವಿ ಎಂದ ಚೀನಾ