Publish Date: Fri, 01 Sep 2017 (13:39 IST)
Updated Date: Fri, 01 Sep 2017 (13:41 IST)
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಸಚಿವ ಖಾತೆಯನ್ನು ರಮಾನಾಥ್ ರೈ ಅವರಿಗೆ ನೀಡಲಾಗಿದೆ.
ಅರಣ್ಯ ಖಾತೆ ಸಚಿವರಾಗಿದ್ದ ರಮಾನಾಥ್ ರೈ ಅವರಿಗೆ ಬಡ್ತಿ ನೀಡಿ ಗೃಹ ಖಾತೆಯನ್ನು ವಹಿಸಲಾಗಿದೆ. ನೂತನವಾಗಿ ಸಚಿವರಾಗಲಿರುವ ಎಚ್.ಎಂ.ರೇವಣ್ಣ ಅವರಿಗೆ ಅರಣ್ಯ ಖಾತೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪ್ರಿಯಾಂಕಾ ಖರ್ಗೆ, ಈಶ್ವರ್ ಖಂಡ್ರೆ, ಪ್ರಮೋದ್ ಮದ್ವರಾಜ್, ರುದ್ರಪ್ಪಾ ಲಮಾಣಿಯವರಿಗೆ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗಿದೆ.
ಆರ್.ಬಿ.ತಿಮ್ಮಾಪುರ್ ಮತ್ತು ಎಚ್.ಎಂ.ರೇವಣ್ಣ ಅವರಿಗೂ ಸಂಪುಟ ದರ್ಜೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.