Publish Date: Thu, 31 Aug 2017 (20:29 IST)
Updated Date: Thu, 31 Aug 2017 (20:32 IST)
ಗ್ರಾಮೀಣ ಪ್ರದೇಶಗಳಿಗೆ ತೆರಳಿ ಶೌಚಾಲಯ ನಿರ್ಮಾಣಕ್ಕಾಗಿ ಗುದ್ದಲಿ ಹಿಡಿದು ಶೌಚಗುಂಡಿ ತೆಗೆದಿದ್ದ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಅಶ್ವತಿ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
ಆಕ್ಟೋಬರ್ 2 ರೊಳಗೆ ಜಿಲ್ಲೆಯನ್ನು ಶೌಚಮುಕ್ತ ಜಿಲ್ಲೆಯನ್ನಾಗಿಸಬೇಕು ಎನ್ನುವ ಗುರಿಯೊಂದಿಗೆ ಸಿಇಒ ಅಶ್ವತಿ ತಮ್ಮ ಅಧಿಕಾರಿಗಳೊಂದಿಗೆ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರನ್ನು ಹುರಿದುಂಬಿಸುತ್ತಿದ್ದಾರೆ.
ಸಮಾಜದಲ್ಲಿ ಬದಲಾವಣೆ ಬರಬೇಕು. ಅದಕ್ಕೆ ಅಶ್ವತಿಯಂತಹ ಅಧಿಕಾರಿಗಳು ಸಮಾಜದಲ್ಲಿ ಇರಬೇಕು. ಅವರ ಕಾರ್ಯ ಇತರರಿಗೆ ಸ್ಪೂರ್ತಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲ ತಾಣಗಳಲ್ಲಿ ಸಿಇಒ ಅಶ್ವತಿ ಪರ ಹರಿದುಬರುತ್ತಿರುವ ಶ್ಲಾಘನೆಗಳಿಗೆ ಸ್ಪಂದಿಸಿದ ಸಿಎಂ, ಇಂತಹ ಅಧಿಕಾರಿಗಳಿಂದ ಮಾತ್ರ ರಾಜ್ಯದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.