Select Your Language

Notifications

webdunia
webdunia
webdunia
webdunia

ಇದ್ದುದರಲ್ಲಿಯೇ ರಾಮಲಿಂಗಾರೆಡ್ಡಿ ಉತ್ತಮ: ಆರ್ ಅಶೋಕ್

ಇದ್ದುದರಲ್ಲಿಯೇ ರಾಮಲಿಂಗಾರೆಡ್ಡಿ ಉತ್ತಮ: ಆರ್ ಅಶೋಕ್
ಬೆಂಗಳೂರು , ಶುಕ್ರವಾರ, 1 ಸೆಪ್ಟಂಬರ್ 2017 (20:25 IST)
ಕಾಂಗ್ರೆಸ್ ನಾಯಕರಲ್ಲಿ ಇದ್ದುದರಲ್ಲಿಯೇ ಗೃಹಸಚಿವರಾಗಿರುವ ರಾಮಲಿಂಗಾರೆಡ್ಡಿ ಉತ್ತಮ ವ್ಯಕ್ತಿ. ಆದ್ರೆ ಇವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
ರಾಮಲಿಂಗಾರೆಡ್ಡಿ ಯಾವ ರೀತಿ ಕೆಲಸ ಮಾಡ್ತಾರೋ ನೋಡೋಣ. ಯಾಕೆಂದರೆ ಗೃಹ ಇಲಾಖೆ ಒಂದು ಮನೆ ಎರಡು ಬಾಗಿಲು ರೀತಿ ಆಗಿದೆ. ಸತ್ತುಹೋದ ಗೃಹ ಇಲಾಖೆಗೆ ಚೇತರಿಕೆ ನೀಡ್ತಾರಾ ಎನ್ನುವುದು ಕಾದು ನೋಡಬೇಕಾಗಿದೆ ಎಂದರು.
 
ಸಚಿವ ರಾಮಲಿಂಗಾರೆಡ್ಡಿ ಸಂಪೂರ್ಣ ಸ್ವಾತಂತ್ರ್ಯದಿಂದ ಕಾರ್ಯನಿರ್ವಹಿಸುತ್ತಾರೆ ಎನ್ನುವುದು ಅನುಮಾನವಾಗಿದೆ. ಅವರಿಗೆ ಕೆಂಪಯ್ಯ ಕಾರ್ಯ ಮಾಡಲು ಬಿಡ್ತಾರಾ ಎನ್ನುವ ಅನುಮಾನ ಕಾಡ್ತಿದೆ ಎಂದು ತಿಳಿಸಿದ್ದಾರೆ.
 
ಕರಾವಳಿಯಲ್ಲಿ ಕೋಮುಗಲಭೆಗೆ ರಮಾನಾಥ್ ರೈ ಕಾರಣ. ಅವರ ವಿರುದ್ಧ ಹೋರಾಟ ಕೈಬಿಡುವುದಿಲ್ಲ. ರೈ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿಗೆ ಕೇಂದ್ರಸಚಿವ ಸ್ಥಾನ?