Select Your Language

Notifications

webdunia
webdunia
webdunia
webdunia

ಅನಾಮಧೇಯ ಫೋನ್ ಕರೆಯಿಂದ ಮುರಿದು ಬಿದ್ದ ಮದುವೆ!

ಅನಾಮಧೇಯ ಫೋನ್ ಕರೆಯಿಂದ ಮುರಿದು ಬಿದ್ದ ಮದುವೆ!
ಚೆನ್ನಪಟ್ಟಣ , ಶುಕ್ರವಾರ, 22 ನವೆಂಬರ್ 2019 (10:58 IST)
ಚೆನ್ನಪಟ್ಟಣ : ಒಂದೇ ಒಂದು ಫೋನ್ ಕಾಲ್ ಗೆ ಆರತಕ್ಷತೆಗೂ ಮುನ್ನ ಮದುವೆಯೇ ಮುರಿದು ಬಿದ್ದ ಘಟನೆ ಚೆನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ನಡೆದಿದೆ.



ಭಾಗ್ಯಶ್ರೀ- ಬಸವರಾಜು ಎಂಬುವವರಿಗೆ ಆರು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಇಂದು ಅವರ ಮದುವೆ ಚೇತನ ಸಮುದಾಯದ ಭವನದಲ್ಲಿ ನಡೆಯಬೇಕಿತ್ತು. ಆದರೆ ಆರತಕ್ಷತೆಗೂ ಮುನ್ನ ಅನಾಮಧೇಯ ವ್ಯಕ್ತಿಯೊಬ್ಬ ಹುಡುಗಿಯ ಮನೆಯವರಿಗೆ ಕಾಲ್ ಮಾಡಿ ಹುಡುಗನಿಗೆ ಮೊದಲೇ ಮದುವೆಯಾಗಿದೆ, ಮಕ್ಕಳು ಇದ್ದಾರೆ ಎಂದು ಹೇಳಿದ್ದಾನೆ. ಈ ವಿಚಾರಕ್ಕೆ ಹುಡುಗಿ ಮನೆಯವರು ಮದುವೆ ಕ್ಯಾನ್ಸಲ್ ಮಾಡಿ ಆನಂದ್ ಎಂಬ ಬೇರೋಬ್ಬ ಯುವಕನ ಜೊತೆ ಭಾಗ್ಯಶ್ರೀಗೆ ಇಂದು ವಿವಾಹ ಮಾಡಿದ್ದಾರೆ.  


ಈ ಬಗ್ಗೆ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಧ್ಯರಾತ್ರಿಯವರೆಗೂ ಗಂಡಿನ ಮನೆಯವರಿಂದ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆದಿದೆ. ನನಗೆ ಮದ್ವೆಯಾಗಿದೆ ಅನ್ನೋದನ್ನು ಸಾಬೀತುಪಡಿಸಿ ಎಂದು ವರ ಪಟ್ಟುಹಿಡಿದಿದ್ದಾನೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-.ವಿ.ಸದಾನಂದಗೌಡ ವಾಗ್ದಾಳಿ