ಅಬ್ಬಾ...!! ಪ್ರಿಯಾಂಕ-ನಿಕ್ ಜೋಡಿ ಅದೆಷ್ಟು ಆರತಕ್ಷತೆ ಮಾಡುತ್ತಾರೋ!!

ಭಾನುವಾರ, 23 ಡಿಸೆಂಬರ್ 2018 (09:50 IST)
ಮುಂಬೈ: ಪ್ರಿಯಾಂಕ ಚೋಪ್ರ ಮತ್ತು ನಿಕ್ ಜೊನಾಸ್ ಮದುವೆಯಾಗಿ ಎರಡು ವಾರದ ಮೇಲಾಗಿದೆ. ಈ ದಿನಗಳಲ್ಲಿ ಅವರು ಅದೆಷ್ಟು ಬಾರಿ ಆರತಕ್ಷತೆ ಎಂದು ಪೋಸ್ ಕೊಡಬೇಕಾಗಿದೆಯೋ.. ಆದರೆ ಅವರ ಆರತಕ್ಷತೆ ಪರ್ವ ಇನ್ನೂ ಮುಗಿದಿಲ್ಲ.


ಜೋಧ್ ಪುರದಲ್ಲಿ ಮದುವೆಯಾದ ಜೋಡಿ ದೆಹಲಿ, ಮುಂಬೈ ನಲ್ಲಿ ಆರತಕ್ಷತೆ ಮುಗಿಸಿದೆ. ಇದೀಗ ನಿಕ್ ತವರೂರು ಅಮೆರಿಕಾದಲ್ಲೂ ಮತ್ತೊಂದು ಆರತಕ್ಷತೆ ಆಯೋಜಿಸಲಾಗುತ್ತದಂತೆ. ಲಾಸ್ ಏಂಜಲೀಸ್ ನಲ್ಲಿ ನಿಕ್-ಪ್ರಿಯಾಂಕ ಆಪ್ತರಿಗಾಗಿ ಆರತಕ್ಷತೆ ಏರ್ಪಾಡು ಮಾಡಲಾಗುತ್ತಿದೆಯಂತೆ.

ಇವರ ಆರತಕ್ಷತೆ ಪರ್ವ ನೋಡಿ ಸ್ವತಃ ನಿಕ್ ಸಹೋದರಿ ಡೇನಿಯಲ್ ಬಹುಶಃ ಪ್ರಿಯಾಂಕಗೆ ರಿಸೆಪ್ಷನ್ ನಲ್ಲಿ ಭಾಗವಹಿಸಿಯೇ ಸುಸ್ತಾಗಿರಬೇಕು ಎಂದಿದ್ದಾರೆ. ಈ ಆರತಕ್ಷತೆಗಳ ಗೌಜಿ ಗದ್ದಲಗಳ ನಡುವೆ ಈ ಜೋಡಿ ಹನಿಮೂನ್ ಕೂಡಾ ಹೋಗಲು ಪುರುಸೊತ್ತಾಗಿಲ್ಲ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ವಿನೂತನ ದಾಖಲೆಯೊಂದನ್ನು ಮಾಡಿದ ಕೆಜಿಎಫ್