Publish Date: Wed, 19 Dec 2018 (09:22 IST)
Updated Date: Wed, 19 Dec 2018 (09:24 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವರ್ತನೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ ಕೊಹ್ಲಿಯನ್ನು ದುರಹಂಕಾರಿ ಎಂದು ಕರೆದಿದ್ದಾರೆ.
ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ನಾಯಕನ ಜತೆಗೆ ಮೈದಾನದಲ್ಲಿ ಕಿತ್ತಾಡಿದ ಬೆನ್ನಲ್ಲೇ ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
‘ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಇರಬಹುದು. ಆದರೆ ಅವರು ಅಷ್ಟೇ ಕೆಟ್ಟ ನಡತೆಯುಳ್ಳಿ ಕ್ರಿಕೆಟಿಗ. ಅವರ ಕೆಟ್ಟ ಗುಣ ಮತ್ತು ದುರಹಂಕಾರದಿಂದಾಗಿ ಅವರು ಕ್ರಿಕೆಟ್ ನಲ್ಲಿ ಮಾಡಿದ ಸಾಧನೆ ಪೇಲವವೆನಿಸುತ್ತದೆ. ಹಾಗಂತ ನಾನು ಹೀಗೆ ಹೇಳಿದ್ದಕ್ಕೆ ದೇಶ ಬಿಟ್ಟು ಹೋಗಲ್ಲ’ ಎಂದು ಶಾ ವ್ಯಂಗ್ಯ ಮಾಡಿದ್ದಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ನಿಮಗಿಂತ ನನಗೆ ಇಂಗ್ಲೆಂಡ್, ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳೆಂದರೆ ಇಷ್ಟ ಎಂದಿದ್ದಕ್ಕೆ ಕೊಹ್ಲಿ ದೇಶ ಬಿಟ್ಟು ಹೋಗಿ ಎಂದು ಹೇಳಿ ವಿವಾದವೆಬ್ಬಿಸಿದ್ದರು. ಅದೇ ಕಾರಣಕ್ಕೆ ಇದೀಗ ಕೊಹ್ಲಿಯನ್ನು ಟೀಕಿಸಿ ಶಾ ವ್ಯಂಗ್ಯವಾಗಿ ನಾನು ದೇಶ ಬಿಟ್ಟು ಹೋಗಲ್ಲ ಎಂದಿದ್ದಾರೆ. ಹಿರಿಯ ನಟನ ಈ ಕಾಮೆಂಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ