Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ಕಿತ್ತಾಡಿದ ವಿರಾಟ್ ಕೊಹ್ಲಿ-ಟಿಮ್ ಪೇಯ್ನ್

ವಿರಾಟ್ ಕೊಹ್ಲಿ
ಪರ್ತ್: ಸ್ಲೆಡ್ಜಿಂಗ್ ಇಲ್ಲ ಎನ್ನುತ್ತಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಆಗಾಗ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸೀಸ್ ನಾಯಕ ಟಿಮ್ ಪೇಯ್ನ್ ಕಿತ್ತಾಡಿಕೊಂಡ ಘಟನೆ ನಡೆದಿದೆ.


ಇಬ್ಬರೂ ಆಟಗಾರರು ಸ್ಲೆಡ್ಜಿಂಗ್ ಬಗ್ಗೆಯೇ ಕಿತ್ತಾಡಿಕೊಂಡಿದ್ದು, ಮಧ್ಯಪ್ರವೇಶಿಸಿದ ಅಂಪಾಯರ್ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

ನಾಲ್ಕನೇ ದಿನದ ಆರಂಭದಲ್ಲಿ ಉಭಯ ಆಟಗಾರರೂ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ. ಬ್ಯಾಟಿಂಗ್ ಮಾಡುತ್ತಿದ್ದ ಟಿಮ್ ಪೇಯ್ನ್ ಮೂರನೇ ದಿನ ನೀನು ಅದು ಹೇಗೆ ತಾಳ್ಮೆ ಕಳೆದುಕೊಂಡೆ ಎಂದು ಕೊಹ್ಲಿಗೆ ಹೇಳುತ್ತಿದ್ದರು.

ಬಳಿಕ ನಿನ್ನೆ ನೀನೇ ತಾಳ್ಮೆ ಕಳೆದುಕೊಂಡು ಈವತ್ತು ನನಗೆ ಶಾಂತಿಯಿಂದಿರಲು ಹೇಳುತ್ತೀಯಾ ಎಂದು ಟಿಮ್ ಕೆಣಕಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅಂಪಾಯರ್ ‘ಸಾಕು. ನೀವಿಬ್ಬರೂ ನಾಯಕರು ಮೊದಲು ಆಟ ಆಡಿ. ಟಿಮ್ ನೀನು ನಾಯಕ’ ಎಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೂ ಟಿಮ್ ಕೊಹ್ಲಿಗೆ ‘ಮೊದಲು ನಿನ್ನ ತಾಳ್ಮೆ ಕಾಯ್ದುಕೋ’ ಎಂದು ಹೇಳಿದಾಗ ಕೊಹ್ಲಿ ವ್ಯಂಗ್ಯವಾಗಿ ನಕ್ಕು ಸುಮ್ಮನಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಶೂನ್ಯ ಸುತ್ತಿದರೂ ದಿಗ್ಗಜ ಸುನಿಲ್ ಗವಾಸ್ಕರ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್