Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ವಿರುದ್ಧ ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧ ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ
ಪರ್ತ್ , ಸೋಮವಾರ, 17 ಡಿಸೆಂಬರ್ 2018 (15:37 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಭೀತಿಗೆ ಸಿಲುಕಿದೆ.


ನಾಲ್ಕನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ ನೀಡಿರುವ 288 ರನ್ ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು ಕೇವಲ 112 ರನ್ ಗಳಿಸಿ ಸಂಕಷ್ಟದಲ್ಲಿದೆ. ಪ್ರಮುಖ ಬ್ಯಾಟ್ಸ್ ಮನ್ ಗಳೆಲ್ಲಾ ಪೆವಿಲಿಯನ್ ಸೇರಿಕೊಂಡಿದ್ದು, ಇದೀಗ ಕ್ರೀಸ್ ನಲ್ಲಿ 24 ರನ್ ಗಳಿಸಿರುವ ಹನುಮ ವಿಹಾರಿ ಮತ್ತು 9 ರನ್ ಗಳಿಸಿರುವ ರಿಷಬ್ ಪಂತ್ ಆಡುತ್ತಿದ್ದಾರೆ.

ಇನ್ನೂ ಗೆಲುವಿಗೆ 175 ರನ್ ಗಳಿಸಬೇಕಿದ್ದು, ಭಾರತದ ಬಳಿ ನೆಲಕಚ್ಚಿ ನಿಂತು ಆಡುವ ಆಟಗಾರರಿಲ್ಲ. ಈ ಜೋಡಿ ಬೇರ್ಪಟ್ಟರೆ ಬಾಲಂಗೋಚಿಗಳಷ್ಟೇ ಬಾಕಿ. ಟೀಂ ಇಂಡಿಯಾದ ಕೆಳಕ್ರಮಾಂಕ ಸಶಕ್ತ ಬ್ಯಾಟಿಂಗ್ ಹೊಂದಿಲ್ಲದೇ ಇರುವುದರಿಂದ ಸೋಲಿನ ಭೀತಿ ಎದುರಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಬೌಲರ್ ಗಳನ್ನು ಯಾಮಾರಿಸಿದ ಆಸ್ಟ್ರೇಲಿಯಾ