Daily Horoscope

Select Your Language

Notifications

webdunia
webdunia
webdunia
webdunia

ಆಂಡ್ರ್ಯೂ ಸಿಮಂಡ್ಸ್ ಬಳಿ ತಾನ್ಯಾವತ್ತೂ ಕ್ಷಮೆ ಕೇಳಿಲ್ಲ ಎಂದ ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್
ನವದೆಹಲಿ: 2008 ರ ಜನಾಂಗೀಯ ನಿಂದನೆ ಪ್ರಕರಣದಲ್ಲಿ ತಮ್ಮನ್ನು ಮಂಕಿ ಎಂದು ಕರೆದಿದ್ದ ಹರ್ಭಜನ್ ಸಿಂಗ್ ಬಳಿಕ ತಮ್ಮ ಬಳಿ ಕ್ಷಮೆ ಯಾಚಿಸಿದ್ದರು ಎಂಬ ಆಂಡ್ರ್ಯೂ ಸಿಮಂಡ್ಸ್ ಹೇಳಿಕೆಯನ್ನು ಭಜಿ ನಿರಾಕರಿಸಿದ್ದಾರೆ.


ಭಜಿ ಮತ್ತು ಸಿಮಂಡ್ಸ್ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಪಂದ್ಯಾವಳಿ ಆಡಿದ್ದರು. ಈ ವೇಳೆ ತಾನು ಜನಾಂಗೀಯ ನಿಂದನೆ ಪ್ರಕರಣದ ಬಳಿಕ ತನ್ನ ಜೀವನದಲ್ಲಿ ಕಹಿ ಘಟನೆಗಳನ್ನು ಹೇಳಿದಾಗ ಭಜಿ ತಮ್ಮ ಎದುರು ಬಿಕ್ಕಿ ಬಿಕ್ಕಿ ಅತ್ತು ಕ್ಷಮೆ ಯಾಚಿಸಿದರು ಎಂದು ಸಿಮಂಡ್ಸ್ ಹೇಳಿಕೊಂಡಿದ್ದರು.

ಆದರೆ ಸಿಮಂಡ್ಸ್ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಭಜಿ ‘ಯಾರು ಯಾವಾಗ ಇದೆಲ್ಲಾ ನಡೆದಿತ್ತು? ಬಿಕ್ಕಿ ಬಿಕ್ಕಿ ಅತ್ತಿದ್ದೆನಾ? ಯಾಕೆ?’ ಎಂದು ಭಜಿ ಅಚ್ಚರಿಯಿಂದ ಟ್ವೀಟ್ ಮಾಡಿದ್ದಾರೆ.  ಅಷ್ಟೇ ಅಲ್ಲ, ಸಿಮಂಡ್ಸ್ ಅಂದು ಒಂದು ಕಟ್ಟು ಕತೆ ಹೇಳಿದರು. ಇಂದು ಮತ್ತೊಂದು ಕತೆ ಕಲ್ಪನೆ ಮಾಡಿಕೊಂಡು ಹೇಳುತ್ತಿದ್ದಾರೆ ಎಂದು ಭಜಿ ಕಟುವಾಗಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಕಾಲಿಗೆ ಚಪ್ಪಲಿ ಹಾಕಿ ಸುದ್ದಿಯಾದ ಧೋನಿ!