Publish Date: Mon, 17 Dec 2018 (10:15 IST)
Updated Date: Mon, 17 Dec 2018 (10:17 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ಭೋಜನ ವಿರಾಮದ ವೇಳೆಗೆ ಆಸೀಸ್ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿದ್ದು, 233 ರನ್ ಗಳ ಮುನ್ನಡೆ ಸಾಧಿಸಿದೆ.
ಇದರೊಂದಿಗೆ ಆಸೀಸ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಕೇವಲ ವೇಗಿಗಳನ್ನು ನೆಚ್ಚಿಕೊಂಡು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಆಸ್ಟ್ರೇಲಿಯನ್ನರನ್ನು ಪೆವಿಲಿಯನ್ ಗೆ ಕಳುಹಿಸಲು ಹೆಣಗಾಡುತ್ತಿದೆ.
ಇಂದು ಭೋಜನ ವಿರಾಮದ ವರೆಗೂ ಆಸ್ಟ್ರೇಲಿಯಾ ವಿಕೆಟ್ ಕಳೆದುಕೊಳ್ಳದೇ ಭಾರತೀಯ ಬೌಲರ್ ಗಳನ್ನು ಮತ್ತಷ್ಟು ಸುಸ್ತು ಮಾಡಿದ್ದಾರೆ. ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ 67 ರನ್ ಗಳಿಸಿದರೆ ಟಿಮ್ ಪೇಯ್ನ್ 37 ರನ್ ಗಳಿಸಿ ಆಡುತ್ತಿದ್ದಾರೆ. ಅತಿಥೇಯ ಪಡೆ ಕೊಂಚ ನಿಧಾನಗತಿಯಲ್ಲಿ ಆಡಿದರೂ ಇನಿಂಗ್ಸ್ ಮುನ್ನಡೆಯೂ ಸೇರಿರುವುದರಿಂದ ಈ ಪಂದ್ಯದಲ್ಲಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ