Publish Date: Mon, 17 Dec 2018 (09:27 IST)
Updated Date: Mon, 17 Dec 2018 (09:28 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತೊಂದು ದಾಖಲೆ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆದು ದಾಖಲೆ ಮಾಡಿದ್ದ ರಿಷಬ್ ಇದೀಗ ಮತ್ತೊಂದು ದಾಖಲೆ ಮಾಡಿದ್ದು, ಭಾರತದ ಪರ ಒಂದೇ ತಂಡದ ವಿರುದ್ಧ ವಿರುದ್ಧ ಅತೀ ಹೆಚ್ಚು ಕ್ಯಾಚ್ ಪಡೆದ ದಾಖಲೆ ಬರೆದಿದ್ದಾರೆ. ರಿಷಬ್ ಪಡೆದ ಕ್ಯಾಚ್ ಗಳ ಸಂಖ್ಯೆ ಇದೀಗ 15 ಕ್ಕೆ ಏರಿದೆ.
ಇದಕ್ಕೂ ಮೊದಲು ಸೈಯದ್ ಕಿರ್ಮಾನಿ, ಧೋನಿ, ವೃದ್ಧಿಮಾನ್ ಸಹಾ 14 ಬಾರಿ ಔಟ್ ಮಾಡಿ ಈ ದಾಖಲೆ ಹೊಂದಿದ್ದರು. ಇದೀಗ ಆ ದಾಖಲೆ ರಿಷಬ್ ಹೆಸರಿಗೆ ವರ್ಗಾವಣೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ