Publish Date: Sun, 23 Dec 2018 (09:47 IST)
Updated Date: Sun, 23 Dec 2018 (09:48 IST)
ಬೆಂಗಳೂರು: ಅಬ್ಬರದ ಪ್ರಚಾರ, ಕಾತರದ ನಡುವೆ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆಯೊಂದನ್ನು ಮಾಡಿದೆ.
ಮೂಲಗಳ ಪ್ರಕಾರ ಕೆಜಿಎಫ್ ಮೊದಲ ದಿನವೇ 24.05 ಕೋಟಿ ರೂ. ಗಳಿಕೆ ಮಾಡಿದೆ. ಬಹುಶಃ ಇದು 100 ಕೋಟಿ ಕ್ಲಬ್ ಸೇರುವ ಸಿನಿಮಾವಾಗುವ ಲಕ್ಷಣ ಕಾಣುತ್ತಿದೆ.
ಈ ಮೂಲಕ ಮೊದಲ ದಿನವೇ ಇಷ್ಟೊಂದು ಗಳಿಕೆ ಮಾಡಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಗಲಿದೆ. ಅಷ್ಟೇ ಅಲ್ಲ, ಕನ್ನಡ ಸಿನಿಮಾವೊಂದು ಏಕಕಾಲಕ್ಕೆ ಇಷ್ಟೊಂದು ಭಾಷೆಗಳಲ್ಲಿ ಒಂದೇ ದಿನ ಬಿಡುಗಡೆಯಾಗಿ ಇಷ್ಟೊಂದು ಮಟ್ಟಿಗೆ ಕ್ರೇಜ್ ಹುಟ್ಟಿಸಿದ್ದು ಇದೇ ಮೊದಲು. ಇದು ಕನ್ನಡ ಸಿನಿಮಾ ರಂಗದ ಪಾಲಿಗೆ ಪ್ಲಸ್ ಪಾಯಿಂಟ್.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ