Publish Date: Fri, 22 Nov 2019 (10:41 IST)
Updated Date: Fri, 22 Nov 2019 (10:43 IST)
ಬೆಂಗಳೂರು : ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಈಗ ಏಕಾಂಗಿಯಾಗಿದ್ದಾರೆ. ಸಿದ್ದರಾಮಯ್ಯ ಹಿಂದೆ ಯಾವ ನಾಯಕರೂ ಇಲ್ಲ, ಹೀಗಾಗಿ ಅವರು ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಹಾಗೇ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ನಾಮಪತ್ರ ವಾಪಾಸ್ ವಿಚಾರ ನಾಮಪತ್ರ ವಾಪಾಸ್ ಪಡೆಯುವಂತೆ ನಾವು ಒತ್ತಾಯಿಸಿಲ್ಲ. ಸ್ವಂತ ನಿರ್ಧಾರದಿಂದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಚ್.ಡಿ.ಡಿ.ಕುಟುಂಬಸ್ಥರಿದ್ದಾರೆ. 9 ಜನ ಹೆಚ್.ಡಿ.ಡಿ.ಕುಟುಂಬದವರು, 3 ಜನ ಬೇರೆಯವರಿದ್ದಾರೆ. ಹೆಚ್.ಡಿ.ಡಿ.ಕುಟುಂಬಸ್ಥರೇ ಸ್ಟಾರ್ ಪ್ರಚಾರಕರಾ...? ಎಂದು ಅವರು ವ್ಯಂಗ್ಯವಾಡಿದ್ದಾರೆ.