Publish Date: Fri, 22 Nov 2019 (06:36 IST)
Updated Date: Fri, 22 Nov 2019 (06:38 IST)
ಬೆಂಗಳೂರು : ಮಿಕ್ಸಿಯನ್ನು ನಾವು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿ ಗಲೀಜು ಕುಳಿತುಕೊಂಡಿರುತ್ತದೆ. ಅದನ್ನು ಹಾಗೇ ಒರೆಸಿದರೆ ಅದು ಕ್ಲೀನ್ ಆಗುವುದಿಲ್ಲ. ಮಿಕ್ಸಿ ಹೊಸದರಂತೆ ಫಳಪಳ ಹೊಳೆಯುವಂತಾಗಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ.
2 ಚಮಚ ಬೇಕಿಂಗ್ ಪೌಡರ್, ½ ನಿಂಬೆಹಣ್ಣಿನ ರಸ, ಹಲ್ಲುಜ್ಜುವ ಪೇಸ್ಟ್ 1 ಚಮಚ ಹಾಕಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಬ್ರೆಶ್ ನ ಸಹಾಯದಿಂದ ಮಿಕ್ಸಿಗೆ ಹಚ್ಚಿ. ಬಳಿಕ ಸ್ಕ್ರಬ್ ನಿಂದ ತಿಕ್ಕಿ, ನಂತರ ಒಣ ಬಟ್ಟೆಯಿಂದ ಒರೆಸಿ. ಆಮೇಲೆ ನೀರಿಗೆ ಸೋಪ್ ಆಯಿಲ್ ಹಾಕಿ ಅದರಲ್ಲಿ ಬಟ್ಟೆಯನ್ನು ಚೆನ್ನಾಗಿ ಹಿಂಡಿ ಮತ್ತೆ ಮಿಕ್ಸಿಯನ್ನು ಒರೆಸಿ. ಹೀಗೆ ಮಾಡಿದರೆ ಮಿಕ್ಸಿ ಕ್ಲೀನ್ ಆಗುವುದರ ಜೊತೆಗೆ ಹೊಸದರಂತೆ ಹೊಳೆಯುತ್ತದೆ.