Publish Date: Fri, 15 Apr 2022 (18:06 IST)
Updated Date: Fri, 15 Apr 2022 (18:12 IST)
ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಪುಟ್ಪಾಕ್ ಗ್ರಾಮದಲ್ಲಿ 2 ಸಮುದಾಯಗಳ ಮಧ್ಯೆ ಮಾರಾಮಾರಿಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಮೃಗಗಳಂತೆ ಗ್ರಾಮಸ್ಥರು ವರ್ತಿಸಿದ್ದಾರೆ. ಮಕ್ಕಳು ಮಹಿಳೆಯರು ಎನ್ನದೆ ಕಲ್ಲು ಬಡಿಗೆಗಳಿಂದ ಒಬ್ನರನ್ನೊಬ್ಬರಿಗೆ ಬಡಿದಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಗಲಾಟೆಯಲ್ಲಿ ಹಲವರಿಗೆ ಗಾಯಗಳಾಗಿವೆ. ದೊಡ್ಡ ಪ್ರಮಾಣದ ಗಲಾಟೆಯಾದ್ರು ಗ್ರಾಮಸ್ಥರು ಪೋಲೀಸರಿಗೆ ಮಾಹಿತಿ ನೀಡಿರಲಿಲ್ಲ. ವೈರಲ್ ಆದ ಗಲಾಟೆಯ ವಿಡಿಯೊ ಆದರಿಸಿ 20 ಜನರ ಮೇಲೆ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಗ್ರಾಮದಲ್ಲಿ ಶಾಂತಿ ಕದಡಿದ ಆರೋಪದ ಅಡಿಯಲ್ಲಿ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.