Publish Date: Sat, 18 Jun 2022 (11:19 IST)
Updated Date: Sat, 18 Jun 2022 (11:20 IST)
ಚಿಕ್ಕಮಗಳೂರು : ನರೇಂದ್ರ ಮೋದಿ ಹೆಸರಿನಲ್ಲಿ ಅನ್ನದಾನದ ರಶೀದಿ ನೀಡಲು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸಿಬ್ಬಂದಿ ನಿರಾಕರಿಸಿರುವ ಘಟನೆ ನಡೆದಿದೆ.
ನರೇಂದ್ರ ಮೋದಿ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಯುವಕರ ತಂಡ ವಿಶೇಷ ಪೂಜೆ ಮಾಡಿಸಲು ಮಂತ್ರಾಲಯಕ್ಕೆ ತೆರಳಿತ್ತು. ಅಲ್ಲಿ ನರೇಂದ್ರ ಮೋದಿ ಹೆಸರು ಹೇಳುತ್ತಲೇ ರಶೀದಿ ನೀಡಲು ನಿರಾಕರಿಸಿದೆ.
ಇದಕ್ಕೆ ಬಿಜೆಪಿ ಕಾರ್ಯಕರ್ತರು ರಶೀದಿ ನೀಡಲು ಯಾಕೆ ನಿರಾಕರಿಸುತ್ತೀರಿ ಎಂದು ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ರಶೀದಿ ನೀಡಲು ನಿರಾಕರಿಸಿದ ಸಿಬ್ಬಂದಿಗೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.