Select Your Language

Notifications

webdunia
webdunia
webdunia
webdunia

ಮಂತ್ರಾಲಯದಲ್ಲಿ ಕೊನೆಯ ದಿನ ಮಹಾರಥೋತ್ಸವ

ಮಂತ್ರಾಲಯದಲ್ಲಿ ಕೊನೆಯ ದಿನ ಮಹಾರಥೋತ್ಸವ
bengaluru , ಬುಧವಾರ, 25 ಆಗಸ್ಟ್ 2021 (17:26 IST)

ಮಠದ ಪೀಠಾಧ್ಯಕ್ಷ ಸುಭುದೇಂದ್ರ ತೀರ್ಥರು ರಾಯರಿಗೆ ಗಂಧದ ಹೊಲಿ ಹಚ್ಚುವ ಮೂಲಕ ಉತ್ತರ ಆರಾಧನೆಯನ್ನ ಸಂಭ್ರದಿಂದ ಆಚರಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ, ಕಲಾ ತಂಡಗಳು ಮಹಾರಥೋತ್ಸವಕ್ಕೆ ಮೆರಗು ನೀಡಿದವು. ದೇಶದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆರಾಧನೆಯ ಸಂಭ್ರಮದ ತೆರೆಗೆ ಸಾಕ್ಷಿಯಾದ್ರು.

ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಯ ವಿಶೇಷ 350ನೇ ಆರಾಧನಾ ಮಹೋತ್ಸವ ಉತ್ತರ ಆರಾಧನೆಯ ಮೂಲಕ ಇಂದು ಸಂಭ್ರಮದ ತೆರೆ ಕಂಡಿದೆ. ಮಠದ ಬೀದಿಯಲ್ಲಿ ನಡೆದ ಮಹಾರಥೋತ್ಸವ ಉತ್ತರ ಆರಾಧನೆಯ ವಿಶಿಷ್ಟ ಆಕರ್ಷಣೆ. ದೇಶದ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಜಾನಪದ ಕಲಾ ತಂಡಗಳು ಮಹಾರಥೋತ್ಸವದಲ್ಲಿ ಭಾಗವಹಿಸಿ ರಾಯರ ಆರಾಧನೆಗೆ ಮೆರಗು ನೀಡಿದವು.

ಬೆಳಿಗ್ಗೆಯಿಂದಲೇ ನಿರ್ಮಲ ವಿಸರ್ಜನೆ ಮೂಲಕ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು , ಬೃಂದಾವನದ ಅಲಂಕಾರ ಸೇವೆಯೊಂದಿಗೆ ಪೀಠಾಧ್ಯಕ್ಷ ಸುಭುದೇಂದ್ರ ತೀರ್ಥರು ರಾಯರ ಉತ್ತರ ಆರಾಧನೆಗೆ ಚಾಲನೆ ನೀಡಿದರು. ವಿಶೇಷ ಪುಷ್ಪಾಲಂಕರ ಮಾಡಲಾಗಿದೆ. ಮೂಲ ರಾಮದೇವರಿಗೆ ಪ್ರಾರ್ಥನೆ ಸಲ್ಲಿಸಿದ ಶ್ರೀಗಳು ಪ್ರಹ್ಲಾದ ರಾಯರಿಗೆ ಗಂಧ ಲೇಪಿಸುವ ಮೂಲಕ ಹೋಲಿ ಆಚರಿಸಿದ್ರು. ಗಂಧವನ್ನ ಚಿಮಿಕಿಸುವ ಮೂಲಕ ಭಕ್ತರಿಗೂ ಹೊಲಿಯಲ್ಲಿ ಮಿಂದೇಳುವ ಅವಕಾಶ ನೀಡಲಾಯಿತು.

ಪ್ರಹ್ಲಾದರಾಜರಾಗಿ ರಾಯರು ಭಕ್ತರಿಗೆ ಬಹಿರ್ಮುಖವಾಗಿ ಇಂದು ದರ್ಶನ ಕೊಡುತ್ತಾರೆ ಅನ್ನೋ ನಂಬಿಕೆಯಿದೆ. ಪ್ರಹ್ಲಾದರಾಜರಿಗೆ ಶ್ರೀಗಳು ಹೋಲಿಯನ್ನ ಹಾಕುವ ಮೂಲಕ ಪಾರ್ಥನೆಯನ್ನ ಸಲ್ಲಿಸಿದರು. ಮಹಾರಥೋತ್ಸವಕ್ಕೂ ಮುನ್ನ ವಿದ್ಯಾಪೀಠಕ್ಕೆ ರಥದಲ್ಲಿ ತೆರಳುವ ಉತ್ಸವ ಮೂರ್ತಿ ಪ್ರಹ್ಲಾದರಾಜರು ವಿದ್ಯಾಪೀಠದಲ್ಲಿ ನಡೆಯುವ ಸಂಸ್ಕೃತಾಭ್ಯಸವನ್ನ ಪರಿಶೀಲಿಸುತ್ತಾರೆ ಅನ್ನೋದು ಇಲ್ಲಿನ ಪ್ರತೀತಿ.

ರಥಬೀದಿಗೆ ಬಂದು ಪ್ರಲ್ಲಾದ ರಾಜ್ ರನ್ನು, ಹೂವಿನಿಂದ ಶೃಂಗಾರಗೊಂಡಿದ್ದ ರಥವನ್ನೇರಿ, ಪೂಜೆ ಪುನಸ್ಕಾರಗಳನ್ನು ಮಾಡಿದ ಶ್ರೀಗಳು ನೆರೆದಿದ್ದ ಸಹಸ್ರಾರು ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿ, ಚಾಲನೆ ನೀಡಿದರು. ರಥಬೀದಿಯಲ್ಲಿ, ರಥ ಮಧ್ಯದಲ್ಲಿ ಬಂದಾಗ ಹೆಲಿಕಾಪ್ಟರ್ ಮೂಲಕ ಬಂದ ಶ್ರೀಗಳು ರಥಕ್ಕೆ ಮತ್ತು ಮಠದ ಶಿಖರಗಳಿಗೆ ಪುಷ್ಪವೃಷ್ಟಿ ನಡೆಸಿದರು. ಬಂದಂತ ಭಕ್ತರು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಯನ್ನು ನೋಡಿ ಚಪ್ಪಾಳೆ ತಟ್ಟಿ ಹರ್ಷವನ್ನು ವ್ಯಕ್ತಪಡಿಸಿದರು.

ಸಂಜೆ ನಡೆದ ಸ್ವಸ್ತಿವಾಚನ ಹಾಗೂ ಮಹಾಮಂಗಳಾರತಿಯೊಂದಿಗೆ ಉತ್ತರ ಆರಾಧನೆ ಕಾರ್ಯಕ್ರಮ ಅಂತ್ಯಗೊಳ್ಳಲಿದೆ. ರಾಜ್ಯ ಹೊರರಾಜ್ಯದ ಭಕ್ತರ ಜೊತೆ ಸ್ಥಳೀಯ ಭಕ್ತರ ಸಂಖ್ಯೆ ಇಂದು ಅಧಿಕವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಾಯರ ಆರಾಧನಾ ಕಾರ್ಯಕ್ರಮದ ವೈಭವಯುತ ತೆರೆಯನ್ನ ಕಣ್ತುಂಬಿಕೊಂಡರು. ಸಪ್ತರಾತ್ರೋತ್ಸವ ಇನ್ನೂ ಎರಡು ದಿನ ಕಾಲ ನಡೆಯಲಿದ್ದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್!