Publish Date: Tue, 16 Jan 2024 (18:36 IST)
Updated Date: Tue, 16 Jan 2024 (18:41 IST)
ಬೆಂಗಳೂರು-ಅತಿವೇಗದ ಚಾಲನೆಯಿಂದ ಬಂದ ಬಸ್ ಮುಂದೆ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವಾನಾಪ್ಪಿದ್ದಾನೆ.ಬಸವರಾಜು, ಮೃತ ಬೈಕ್ ಸವಾರನಾಗಿದ್ದು,ತಡರಾತ್ರಿ 1 ಗಂಟೆಗೆ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗದಲ್ಲಿ ಘಟನೆ ನಡೆದಿದೆ.ರಾತ್ರಿ ಡ್ಯೂಟಿಯಲ್ಲಿದ್ದ ಡೆಲಿವರಿ ಬಾಯ್ ಬಸವರಾಜು ಮೃತನಾಗಿದ್ದಾನೆ. ಮೈಸೂರು ರೋಡ್ ಕಡೆಗೆ ಡೆಲವರಿಗೆಂದು ತೆರಳುತ್ತಿದ್ದ .ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಬಳಿಕ ಬಸ್ ಮುಂಭಾಗದ ಎಡಚಕ್ರಕ್ಕೆ ಬೈಕ್ ಸವಾರ ಸಿಲುಕಿದ್ದ .ಈ ವೇಳೆ ಬಸ್ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವಾನಾಪ್ಪಿದ್ದಾನೆ.ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆ ಬಳಿಕ ಚಾಲಕನ ಬಗ್ಗೆ ಸಂಚಾರಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.