Publish Date: Tue, 16 Jan 2024 (16:21 IST)
Updated Date: Tue, 16 Jan 2024 (13:39 IST)
ಮುಂಬೈ : ಶಾಲೆಯ ಉಗ್ರಾಣದಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಇತರ ಕೋಣೆಗಳಿಗೂ ವ್ಯಾಪಿಸಿದೆ. ಶಾಲೆಗೆ ರಜೆಯಿದ್ದ ಕಾರಣ ಆತಂಕ ಪಡುವಂತಹ ಯಾವುದೇ ಸನ್ನಿವೇಶ ಸೃಷ್ಟಿಯಾಗಿಲ್ಲ. ಅಗ್ನಿ ಅವಘಡಕ್ಕೆ ಖಾಸಿಗ ಶಾಲೆಯೊಂದು ಸುಟು ಕರಕಲಾಗಿರುವ ಘಟನೆ ಮುಂಬೈನ ಪರೇಲ್ ಪ್ರದೇಶದಲ್ಲಿ ಸೋಮವಾರ ನಡೆದಿದೆ. ಸುದೈವವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಇದುವರೆಗೂ ವರದಿಯಾಗಿಲ್ಲ. ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಹಾಗು ಹಲವು ನೀರಿನ ಟ್ಯಾಂಕರ್ ಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸುವಲ್ಲಿ ನಿರತವಾಗಿದೆ.