Publish Date: Fri, 12 Oct 2018 (11:25 IST)
Updated Date: Fri, 12 Oct 2018 (11:27 IST)
ನವಜಾತ ಗಂಡು ಶಿಶು ಪತ್ತೆಯಾಗಿರುವ ಘಟನೆ ಬಿಸಿಲೂರು ಖ್ಯಾತಿಯ ಜಿಲ್ಲೆಯಲ್ಲಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಂಠಾಣ ಗ್ರಾಮದಲ್ಲಿ ನವಜಾತ ಗಂಡು ಶಿಶು ಪತ್ತೆಯಾದ ಘಟನೆ ನಡೆದಿದೆ. ಸುಂಠಾಣ ಗ್ರಾಮದ ಮರಗಮ್ಮ ದೇವಸ್ಥಾನದ ಬಳಿ ಶಿಶು ಪತ್ತೆಯಾಗಿದೆ.
ಶಿಶುವನ್ನು ನೋಡಿದ ಸ್ಥಳೀಯರು ಕಾಳಗಿ ಸಮುದಾಯದ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಶಿಶುವಿಗೆ ಚಿಕಿತ್ಸೆ ನಡೆಯುತ್ತಿದೆ. ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.