Select Your Language

Notifications

webdunia
webdunia
webdunia
webdunia

ಯೋಗ ದಸರಾಗೆ ಅದ್ಧೂರಿ ಚಾಲನೆ

ಯೋಗ ದಸರಾಗೆ ಅದ್ಧೂರಿ ಚಾಲನೆ
ಮೈಸೂರು , ಶುಕ್ರವಾರ, 12 ಅಕ್ಟೋಬರ್ 2018 (11:19 IST)
ಮೈಸೂರು ದಸರಾ ಮಹೋತ್ಸವ 2018ರ ಅಂಗವಾಗಿ ಯೋಗ ದಸರಾಗೆ ಉಸ್ತುವಾರಿ ಸಚಿವ ಚಾಲನೆ ನೀಡಿದ್ದಾರೆ.

ಮೈಸೂರಿನಲ್ಲಿ ಯೋಗ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ  ಜಿ.ಟಿ ದೇವೇಗೌಡ ಚಾಲನೆ ನೀಡಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ನಡೆಯುತ್ತಿರುವ ಯೋಗ ದಸರಾ ಇದಾಗಿದೆ. ಯೋಗ ಇಲ್ಲದೆ ಆರೋಗ್ಯ ಇಲ್ಲ. ಆರೋಗ್ಯ ಇಲ್ಲದೆ ಆಯುಷ್ಯ ಇಲ್ಲ ಎಂದು ಸಚಿವ ಜಿ.ಟಿ.ದೇವೇಗೌಡರು ಹೇಳಿದರು.

ಯೋಗ ಜೀವನದಲ್ಲಿ ಎಲ್ಲರಿಗೂ ಅವಶ್ಯಕವಾಗಿ ಬೇಕು. ಕಡ್ಡಾಯವಾಗಿ ಎಲ್ಲರೂ ಯೋಗ ಮಾಡಬೇಕು. ಕಾಲೇಜುಗಳಲ್ಲಿ ಯೋಗ ಶಿಕ್ಷಣ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದರು.  

ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಪ್ರಮುಖವಾದುದು ಯೋಗವಾಗಿದೆ ಎಂದು ಸಚಿವ ಹೇಳಿದರು.
ಮಾಜಿ ಸಚಿವ, ಶಾಸಕ ರಾಮದಾಸ್, ಯೋಗ ಗುರುಗಳಾದ ಪ್ರಕಾಶ್ ಗುರೂಜಿ, ಜಿ.ಪಂ.ಸದಸ್ಯರಾದ ಚಂದ್ರಿಕ ಸುರೇಶ್, ಉದ್ಬೂರು ಮಹದೇವಸ್ವಾಮಿ ಇದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಪತಂಜಲಿ ಉತ್ಪನ್ನಗಳಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ. ಈ ಬಗ್ಗೆ ಸಂಸ್ಥೆ ಪ್ರತಿಕ್ರಿಯೆ ಏನು?