Publish Date: Thu, 04 Oct 2018 (14:42 IST)
Updated Date: Thu, 04 Oct 2018 (14:45 IST)
ಬಿಳಿ ಕಲ್ಲು ಕ್ವಾರಿ ನೀರಿನಲ್ಲಿ ಬಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿಯಲ್ಲಿ ಘಟನೆ ನಡೆದಿದೆ. ಮಹದೇವಸ್ವಾಮಿ ಉರುಫ್ ಸೋಮಣ್ಣ (45) ಕ್ವಾರಿಯಲ್ಲಿನ ನೀರಿನಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.
ಮಹದೇವಸ್ವಾಮಿ ಮೈಸೂರು ಜಿಲ್ಲೆಯ ಚಿಕ್ಕಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. ಲಾರಿ ಚಾಲಕನಾಗಿದ್ದ ಮಹದೇವಸ್ವಾಮಿ ಸಾವು ಅನುಮಾನಾಸ್ಪದವಾಗಿದೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
50 ಅಡಿ ಆಳದ ನೀರಿನಲ್ಲಿ ಮಹದೇವಸ್ವಾಮಿ ಮೃತ ದೇಹ ಪತ್ತೆಯಾಗಿದೆ. ಮಳೆ ನೀರು ತುಂಬಿ ಸ್ಥಗಿತಗೊಂಡಿದ್ದ ಬಿಳಿ ಕಲ್ಲು ಕ್ವಾರಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಗುಂಡ್ಲುಪೇಟೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.